ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರಿಗೆ ಹುಟ್ಟೂರ ಸನ್ಮಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ರಾಜಕೀಯದಲ್ಲಿ ತಾಳ್ಮೆ ಹಾಗೂ ನಿಷ್ಠೆಗಳು ಇದ್ದಾಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಅವಕಾಶಗಳು ದೊರಕಿದಾಗ ಅಧಿಕಾರದ ವ್ಯಾಪ್ತಿಯಲ್ಲಿ ಜನರ ನಿರೀಕ್ಷೆಗಳನ್ನು ಪೂರೈಸುವವನೆ ನಿಜವಾದ ಜನಪ್ರತಿನಿಧಿಯಾಗುತ್ತಾನೆ ಎನ್ನುವುದನ್ನು ನನ್ನ ಅನುಭವದ ಮಾತುಗಳು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

Call us

Call us

ಇಲ್ಲಿಗೆ ಸಮೀಪದ ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಅವರಿಗೆ ಗ್ರಾಮಸ್ಥರು ನೀಡಿದ ’ಹುಟ್ಟೂರ ಸನ್ಮಾನ’ ಸ್ವೀಕರಿಸಿ ಮಾತನಾಡಿದರು.

ಆಕಸ್ಮಿಕವಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ತನಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಆಸ್ಕರ್ ಫೆರ್ನಾಂಡಿಸ್, ಕೆ.ಪ್ರತಾಪ್‌ಚಂದ್ರ ಶೆಟ್ಟಿ, ವೀರಪ್ಪ ಮೊಯಿಲಿ ಮುಂತಾದವರಿಂದ ದೊರಕಿದ ಮಾರ್ಗದರ್ಶನಗಳಿಂದಾಗಿ ರಾಜಕೀಯದಲ್ಲಿ ಈ ಮಟ್ಟದವರೆಗೂ ಬೆಳೆಯಲು ಸಾಧ್ಯವಾಯಿತು. ೪ ಬಾರಿ ಶಾಸಕರನ್ನಾಗಿಸಿದ ಬೈಂದೂರು ಕ್ಷೇತ್ರದ ಮತದಾರರ ಪೂರ್ತಿ ಋಣವನ್ನು ತನ್ನಿಂದ ಖಂಡಿತಾ ತೀರಿಸಲು ಸಾಧ್ಯವಾಗಿಲ್ಲ ಎನ್ನುವ ನೋವು ನನಗಿದೆ. ಶಾಸಕತ್ವದ ಹಿರಿತನದಲ್ಲಿ ಸಚಿವನಾಗಬೇಕು ಎನ್ನುವ ನಿರೀಕ್ಷೆಗಳು ನನ್ನ ಅಭಿಮಾನಿಗಳು ಹಾಗೂ ಸ್ನೇಹಿತ ವರ್ಗದವರಿಗೆ ಇತ್ತು. ಆದರೆ ಅದೂ ಸಾಧ್ಯವಾಗದೆ ಇದ್ದಾಗ, ನನ್ನ ಅರ್ಹತೆಯನ್ನು ಗಮನಿಸಿ ಕಳೆದ ೯ ವರ್ಷಗಳಿಂದ ಯಾರಿಗೂ ನೀಡದ ರಾಜ್ಯ ಮಟ್ಟದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನನ್ನ ಆಯ್ಕೆ ಮಾಡುವ ಮೂಲಕ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖಂಡರು ನನಗೆ ಸಾಮಾಜಿಕ ನ್ಯಾಯವನ್ನು ನೀಡಿದ್ದಾರೆ. ಪಕ್ಷ ನೀಡಿದ ಅಧಿಕಾರದ ಅವಧಿಯಲ್ಲಿ ಎಲ್ಲ ವರ್ಗದ ಜನರಿಗೂ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ನನ್ನನ್ನು ಈ ಸ್ಥಾನದವರೆಗೂ ಏರಿಸಿದ ಹುಟ್ಟೂರ ಗ್ರಾಮಸ್ಥರಿಗೆ ಹಾಗೂ ಕ್ಷೇತ್ರದ ಜನರ ವಿಶ್ವಾಸಗಳನ್ನು ಉಳಿಸಿಕೊಂಡು ಕ್ಷೇತ್ರದ ಅಭಿವೃದ್ದಿ ಮುಂದುವರೆಸುವುದಾಗಿ ಭರವಸೆ ವ್ಯಕ್ತಪಡಿಸಿದರು.

Call us

Call us

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶೃಂಗೇರಿ ಶ್ರೀ ಶಾರದ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ.ಎಚ್.ವಿ.ನರಸಿಂಹಮೂರ್ತಿಯವರು, ಶಾಸಕರಾಗಿ ಆಯ್ಕೆಯಾದ ನಾಲ್ಕು ಅವಧಿಗಳಲ್ಲಿಯೂ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಿದ ಹೆಗ್ಗಳಿಕೆ ಶಾಸಕ ಪೂಜಾರಿಯವರಿಗೆ ಇದೆ. ರಾಜ ಧರ್ಮದ ಪಾಲನೆ ಮಾಡಿದ ಅವರಿಂದ ಬೈಂದೂರಿನ ಸರ್ವಾಂಗೀಣ ಅಭಿವೃದ್ದಿಗೆ ಕಾಯಕಲ್ಪವಾಗಿದೆ. ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ದಿಯಾಗಿದೆ. ಸಾಮಾಜಿಕ ನ್ಯಾಯ ಪಾಲನೆಯಾಗಿದೆ. ಅಧಿಕಾರ ಯಾರ ಸ್ವಂತ ಸ್ವತ್ತು ಅಲ್ಲ, ದೊರಕಿದ ಅವಕಾಶಗಳ ಸದುಪಯೋಗ ಪಡಿಸಿಕೊಂಡು ಮುಂದಕ್ಕೆ ಸಾಗುವವನೆ ನಿಜವಾದ ಜನನಾಯಕರಾಗುತ್ತಾರೆ. ಈ ನಿಟ್ಟಿನಲ್ಲಿ ಶಾಸಕ ಪೂಜಾರಿಯವರು ಬೈಂದೂರು ಕ್ಷೇತ್ರ ಕಂಡ ಒಬ್ಬ ಸಜ್ಜನ ಜನನಾಯಕ ಎಂದು ಅಭಿವಂದಿಸಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ವಿಠ್ಠಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರಾಜೇಶ್ ಕೆ.ಸಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು. ತಾ.ಪಂ ಸದಸ್ಯ ಎಚ್.ರಾಜು ದೇವಾಡಿಗ, ಬೆಂಗಳೂರಿನ ಉದ್ಯಮಿ ಸುರೇಶ್ ಪೂಜಾರಿ, ಮುಂಬೈ ಉದ್ಯಮಿ ಉದಯ್ ನಾರಾಯಣ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯ ಚಂದ್ರಶೇಖರ ಆಚಾರ್ಯ, ಉಪಾಧ್ಯಕ್ಷ ಶರತ್‌ಕುಮಾರ ಶೆಟ್ಟಿ, ಶ್ರೀ ಭದ್ರಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಹಿರಿಯಣ್ಣ ಶೆಟ್ಟಿ, ಉಪಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ, ಮೊಕ್ತೇಸರರಾದ ಸುಬ್ಬಣ್ಣ ಶೆಟ್ಟಿ, ಬಿ.ಭಾಸ್ಕರ ಶೆಟ್ಟಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್.ರಾಜೂ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮದನ್‌ಕುಮಾರ ಉಪ್ಪುಂದ, ಮೆಸ್ಕಾಂ ಸಲಹಾ ಮಂಡಳಿಯ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ರೇವತಿ ಡಿ ಶೆಟ್ಟಿ, ಅಶೋಕ ಬಳೆಗಾರ, ಜೋಗಿ ಕುಟುಂಬದ ಶೇಖರ ಬಳೆಗಾರ ಇದ್ದರು.

ನೂತನವಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಶಾಸಕ ಕೆ.ಗೋಪಾಲ ಪೂಜಾರಿಯವರಿಗೆ ಗ್ರಾಮಸ್ಥರು, ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಅಭಿಮಾನದ ಅದ್ದೂರಿ ಸನ್ಮಾನ ನೀಡಿದರು. ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿ ಸ್ವಾಗತಿಸಿದರು, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ನಾಯ್ಕ್ ಅಭಿನಂದನ ಪತ್ರ ವಾಚಿಸಿದರು, ರಾಘವೇಂದ್ರ ಜೋಗಿ ಕಟ್‌ಬೇಲ್ತೂರು ವಂದಿಸಿದರು, ಶಿಕ್ಷಕ ಜಗದೀಶ್ ಶೆಟ್ಟಿ ಹಾಗೂ ರಾಘವೇಂದ್ರ ಜೋಗಿ ನಿರೂಪಿಸಿದರು.

Leave a Reply

Your email address will not be published. Required fields are marked *

four × 3 =