ಕೆದೂರಿನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪ್ರತಿ ತಿಂಗಳ 3ನೇ ಶನಿವಾರದಂದು ಡಿಸಿಯವರ ನೇತೃತ್ವದಲ್ಲಿ ಜಿಲ್ಲೆಯದ್ಯಾಂತ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಜಿಲ್ಲಾಧಿಕಾರಿಯವರ ನಡೆ ಹಳ್ಳಿಯ ಕಡೆ ಎಂಬ ಒಂದು ವಿಶೇಷವಾದ ಮಹತ್ವದ ಯೋಜನೆ ಸರಕಾರ ಜಾರಿಗೆ ತಂದಿದೆ. ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಈ ಕಾರ‍್ಯಕ್ರಮಕ್ಕೆ ಅ.16ರಿಂದ ಪುನರುಪಿ ಚಾಲನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಆಯಾ ಭಾಗದ ತಹಶೀಲ್ದಾರ್ ಮತ್ತು ಎಸಿಯವರ ನೇತೃತ್ವದಲ್ಲಿ ಗ್ರಾಮಗಳ ವಾಸ್ತವ್ಯ ಹೂಡಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ಸು ಕಾಣುತ್ತಿದೆ ಎಂದು ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೋರಯ್ಯ ಹೇಳಿದರು.

Call us

Call us

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಡಿ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಶನಿವಾರ ವಾಸ್ತವ್ಯ ಹೂಡಿ ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Call us

Call us

ಅವರು ಈ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿಯ ಕೆಲಸದ ಜೊತೆಗೆ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿ ಸ್ಥಳದಲ್ಲಿಯೇ ಸಮಸ್ಯೆಗಳ ಬಗೆಹರಿಸುವಂತಹ ಕೆಲಸಗಳಾಗಲಿವೆ. ಇದಲ್ಲದೇ ಹಾಸ್ಟೇಲ್, ಹಿಂದೂ ರುಧ್ರಭೂಮಿ, ಕಾಲೋನಿ ಪ್ರದೇಶಗಳು, ಅಂಗನವಾಡಿ, ಶಾಲಾ ಕಾಲೇಜುಗಳ ಬೇಟಿಯೊಂದಿಗೆ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳ ಪರಿಶೀಲನೆ ನೆಡಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನಿವೃತ್ತ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ ಮಾತನಾಡಿ, ಕೆದೂರು ಪಂಚಾಯತ್ ಹೃದಯ ಭಾಗದಲ್ಲಿನ ಸರಕಾರಿ ಪ್ರೌಢಶಾಲಾ ಮುಂಭಾಗದಲ್ಲಿರುವ ಹಾಲು ಉತ್ಪಾದಕರ ಸಂಘದ ಎದುರಿನ ಪಂಚಾಯತ್ ಕಟ್ಟದಲ್ಲಿ ವಾಣಿಜ್ಯ ಕಟ್ಟಡಗಳನ್ನು ಬಾಡಿಗೆಗೆ ನೀಡಲಾಗಿದೆ. ಆದರೆ ಸತತ 3 ವರ್ಷಗಳ ಕಾಲ ಯಾವುದೇ ಬಾಡಿಗೆಯನ್ನು ವಾಸೂಲಿ ಮಾಡಲು ಸ್ಥಳೀಯಾಡಳಿತ ವೈಪ್ಯಲ ಕಂಡಿದೆ. ಇದಲ್ಲದೇ ಇದೇ ಸರಕಾರಿ ಸ್ಥಳದಲ್ಲಿ ಅಡಿಕೆ ಮತ್ತು ತೆಂಗಿನ ತೋಟ, ಅಕ್ರಮ ಶೆಡ್ ನಿರ್ಮಾಣ ಮಾಡಿ ಇದೇ ಕಟ್ಟಡದಲ್ಲಿರುವ ಹೊಟೇಲ್‌ನಿಂದ ತ್ಯಾಜ್ಯದ ದುರ್ವಸನೆ ಬೀರುತ್ತಿದೆ ಎಂದು ದೂರಿದರು. ಈ ದೂರಿಗೆ ಸಂಬಂದಪಟ್ಟಂತೆ ತಹಶೀಲ್ದಾರ್ ದೂರು ದಾಖಲಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಂದ ಮಾಹಿತಿ ಪಡೆದು ಕಾನೂನುತ್ಮಾಕವಾಗಿ ಬಾಡಿಗೆ ವಸೂಲಿ ಮತ್ತು ಆಕ್ರಮ ಶೆಡ್ ತೆರವಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಕೆದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಪತ್ ಶೆಟ್ಟಿ ಮಾತನಾಡಿ, ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಖರೀದಿ ಮಾಡಿದ ನಮ್ಮ ಭೂಮಿ ನಮ್ಮ ತೋಟದ 9 ಎಕ್ರೆ ಜಾಗ ಖಾಲಿ ಬಿದ್ದಿದೆ. ಇದನ್ನು ಆ ಯೋಜನೆಯಿಂದ ಕೈ ಬಿಟ್ಟು ಗೃಹ ನಿವೇಶನದ ಬಳಕೆಗೆ ಅವಕಾಶ ಮಾಡಿ ಕೊಡುವಂತೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಕೆದೂರು ಬಿಸಿಎಮ್ ಹಾಸ್ಟೆಲ್, ಹೊಸ್ಮಠ ಧರ್ಮಗೋಳಿ ಪರಿಸರ ಮತ್ತು ಶಾನಾಡಿ ಕೊರಗ ಕಾಲೋನಿ ಸೇರಿದಂತೆ ಇನ್ನಿತರ ಕಡೆಗಳಿಗೆ ತಹಶೀಲ್ದಾರ್ ನೇತೃತ್ವದ ತಂಡ ಬೇಟಿ ನೀಡಿ ಸಮಸ್ಯೆಗಳನ್ನು ಸ್ವೀಕರಿಸಿದರು.

ಕೆದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೆಟ್ಟಿ ಕಾರ‍್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಮಾಲತಿ ಮೊಗವೀರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಪಧ್ಮನಾಭ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೂ, ತಾಲೂಕು ಪಶು ವೈದ್ಯಾಧಿಕಾರಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್, ಆರ್‌ಐ ದಿನೇಶ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಾರ್ವಜನಿಕರ ಅಹವಾಲು:
ವಾರಾಹಿ ಯೋಜನೆ ಎಂಬುದು ಕೆದೂರು ಭಾಗದಲ್ಲಿ ಯಾವ ಕಡೆ ಹೋಗಿದೆ ಎಂಬ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಬೇಕು. ಕೆದೂರು ಬಿಸಿಎಮ್ ಹಾಸ್ಟೆಲ್ ಸಮೀಪದಲ್ಲಿರುವ ಹಿಂದು ರುಧ್ರಭೂಮಿಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇರೆ ಕಡೆ ಬದಲಾಯಿಸಿಕೊಡುವಂತೆ ದೂರು ನೀಡಲಾಯಿತು. ಪಂಚಾಯತ್ ವ್ಯಾಪ್ತಿಯಲ್ಲಿನ ಗೋಮಾಳ ಜಾಗ ಅಳತೆ ಮಾಡಿಕೊಡಬೇಕು. ನಾರಾಯಣ ಮರಕಾಲ ಇವರ ಆಶ್ರಯ ಮನೆಗೆ ಬರಬೇಕಾದ ಬಾಕಿ ಇರುವ 30 ಸಾವಿರ ಹಣ ಪಾವತಿಗೆ ಮನವಿ. ಶಾರದಾ ಎಂಬುವರ ಮನೆಯ ಮೇಲೆ ರಸ್ತೆಯ ಪಕ್ಕದಲ್ಲಿರುವ ಅಕೇಶಿಯಾ ಮರ ಬೀಳುವ ಆಪಾಯದಲ್ಲಿದ್ದು ಇಲಾಖೆ ತೆರವುಗೊಳಿಸುವ ಕಾರ‍್ಯಕ್ಕೆ ಮುಂದಾಗಬೇಕು ಎಂಬ ದೂರುಗಳು ಸ್ಥಳೀಯರಿಂದ ಕೇಳಿ ಬಂದವು.

Leave a Reply

Your email address will not be published. Required fields are marked *

2 × 2 =