ಕೆದೂರು ಸ್ಪೂರ್ತಿಧಾಮದಲ್ಲಿ ವಿಶೇಷ ಸ್ವಚ್ಚತಾ ಕಾರ್ಯಕ್ರಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೆದೂರು ಸ್ಪೂರ್ತಿಧಾಮದಲ್ಲಿ ಮಹಾತ್ಮ ಗಾಂದೀಜಿಯವರ ಜನ್ಮದಿನದ ಪ್ರಯುಕ್ತ ಒಂದು ದಿನದ ವಿಶೇಷ ಸ್ವಚ್ಚತಾ ಕಾರ್ಯಕ್ರಮ ಮತ್ತು ಶ್ರಮದಾನವನ್ನು ಬೈಂದೂರು ಸರಕಾರಿ ಪ್ರಥಮ ದರ್ಜಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋವರ್ ರೆಂಜರ‍್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ  ನಡೆಯಿತು.

Call us

Call us

ಸ್ಪೂರ್ತಿ ಸಂಸ್ಥೆಯ ರೂವಾರಿ ಡಾ. ಕೇಶವ ಕೋಟೇಶ್ವರ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೋ ಬಿ. ಎ. ಮೇಳಿ ಕಾರ್ಯಕ್ರಮವನ್ನು ಸಂಯೋಜಿಸಿದ್ದು, ಎನ್‌ಎಸ್‌ಎಸ್ ಯೋಜನಾಧಿಕಾರಿ ರವಿಚಂದ್ರ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪಾಂಡುರಂಗ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜ್ಯಶಾಸ್ತ್ರ ವಿಭಾಗ ಉಪನ್ಯಾಸಕ ವೆಂಕಟರಮಣ, ವಾಣಿಜ್ಯಶಾಸ್ತ್ರ ವಿಭಾಗ ಜ್ಯೋತಿ, ವಾಣಿಜ್ಯಶಾಸ್ತ್ರ ವಿಭಾಗ ಶ್ವೇತಾ ಮತ್ತು ಇತರೇ ವಿಭಾಗದ ಉಪನ್ಯಾಸಕ ವೃಂದದವರು ಸಹಕರಿಸಿದರು. ಕಾಲೇಜಿನ ರೋವರ್ ಮತ್ತು ರೆಂಜರ‍್ಸ್ ಘಟಕದ ಅಧಿಕಾರಿ ನಾಗೇಶ್ ವಂದಿಸಿದರು. ಶಿಬಿರಾರ್ಥಿ ಸಂಪ್ರೀತ್ ನಿರೂಪಿಸಿದರು.

Leave a Reply

Your email address will not be published. Required fields are marked *

4 × 3 =