ಕುಂದಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕೆನರಾ ಬ್ಯಾಂಕ್‌ನ ಸಂಸ್ಥಾಪಕ ಅಮ್ಮೆಂಬಳ ಸುಬ್ಬ ರಾವ್ ಪೈ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಗಂಗೊಳ್ಳಿಯ ಉದ್ಯಮಿ ದುರ್ಗರಾಜ್ ಪೂಜಾರಿ ಮಾತನಾಡಿ, ಬ್ಯಾಂಕುಗಳು ಕೇವಲ ಹಣಕಾಸಿನ ಹೃದಯ ಮಾತ್ರವಲ್ಲದೇ, ಮಾನವೀಯ ಹೃದಯದಿಂದಲೂ ಕಾರ್ಯನಿರ್ವಹಿಸಿ, ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಶ್ರಮಿಸಬೇಕೆಂದು ಹೇಳುತ್ತಿದ್ದ ಕೆನರಾ ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬಡವರಿಗಾಗಿ ಬ್ಯಾಂಕ್ ತೆರೆದ ಕರ್ಮಯೋಗಿ ಎಂದು ಹೇಳಿದರು.
ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖಾ ಪ್ರಬಂಧಕ ವಿಷ್ಣುಮೂರ್ತಿ, ಗಂಗೊಳ್ಳಿಯ ಉದ್ಯಮಿ ಎಂ.ಜಿ.ಅಜಿತ್ ನಾಯಕ್, ಬಿ.ರಾಘವೇಂದ್ರ ಪೈ ಬ್ಯಾಂಕಿನ ಆಫೀಸರ್ ಅಶ್ವಿನ್ ಕುಮಾರ್, ರೇಶ್ಮಾ, ಡಿ.ಶಶಿಕಾಂತ್, ಜಿ.ಗಂಗಾಧರ ಪೈ, ಜಾರ್ಜ್ ಫೆರ್ನಾಂಡಿಸ್, ರಾಜೇಂದ್ರ ಬಿ.ಟಿ., ಶಾಂತಿ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.