ಕೆಪಿಎಲ್ ಕ್ರಿಕೆಟ್ ಪಂದ್ಯಾಟ-ಕೊಂಕಣ್ ಸ್ಮಾಶರ್ಸ್ ಪ್ರಥಮ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಪಿಲ್ ಕ್ರಿಕೆಟ್ ಪಂದ್ಯಾಟದ ಮಾದರಿಯಲ್ಲಿ ಕೋಟೇಶ್ವರ ಜಿಎಸ್‌ಬಿ ಸಮಾಜದ ೧೯ ವರ್ಷದ ಒಳಗಿನ ಯುವಕರಿಗಾಗಿ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆದಿತ್ಯವಾರ ಅ ೮ ರಂದು ನಡೆಯಿತು.
ಪ್ರಥಮ ಸ್ಥಾನವನ್ನು ಕೊಂಕಣ್ ಸ್ಮಾಶರ್ಸ್ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಮಹಾಮ್ಮಾಯ ಕ್ರಿಕೆಟರ್ಸ್ ಗಳಿಸಿತು.

Call us

Call us

Click Here

Visit Now

ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕಾರ್ತಿಕ್ ಕಾಮತ್, ಉತ್ತಮ ದಾಂಡಿಗ ಸಂದೀಪ ನಾಯಕ್, ಸೂಪರ್ ಸಿಕ್ಸ್ ಸಂದೀಪ ನಾಯಕ್, ಉತ್ತಮ ಎಸೆತಗಾರ ಕಾರ್ತಿಕ್ ಕಾಮತ್, ಸರಣಿ ಶ್ರೇಷ್ಟ ಶ್ರೀಶ ಕಾಮತ್ ಹಾಗೂ ಉದಯೋನ್ಮುಕ ಕಿರಿಯ ಆಟಗಾರ ಪ್ರಶಸ್ತಿಯನ್ನು ಶೇಷಗಿರಿ ಕಾಮತ್ ಪಡೆದರು.

Click here

Click Here

Call us

Call us

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷರಾದ ಶಂಕರ ಕಾಮತ್ ವಿಜೇತ ತಂಡಕ್ಕೆ ಪ್ರಶಸ್ತಿ ನೀಡಿದರು. ನಂತರ ಮಾತನಾಡುತ್ತಾ ಕ್ರಿಕಟ್‌ನ ಮೈದಾನದಲ್ಲಿ ತೋರಿದ ಉತ್ಸಾಹವನ್ನು ಶಿಕ್ಷಣದಲ್ಲಿಯೂ ತೋರ್ಪಡಿಸಿ ಉತ್ತಮ ಅಂಕಗಳನ್ನು ಗಳಿಸಿ ಪೋಷಕರಿಗೆ, ಸಮಾಜಕ್ಕೆ ಕೀರ್ತಿಯನ್ನು ತರಬೇಕು. ಅಲ್ಲದೇ ದೇವಳದ ಸರ್ವ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹಿತವಚನಗಳನ್ನು ನುಡಿಯುತ್ತಾ ಪಂದ್ಯಾಟವನ್ನು ಆಯೋಜಿಸಿದವರಿಗೆ ಪ್ರಶಂಸಿಸಿದರು.

ಮಲ್ಲಿನಾಥ ಕಾಮತ್, ಸುಕೇಶ ಪ್ರಭು, ಗಣೇಶ ಕಾಮತ್, ಪ್ರಕಾಶ ಪೈ, ರಮೇಶ ಪೈ, ಸುರೇಶ ಕಾಮತ್, ಪ್ರಶಾಂತ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನೀತ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗೈದರು.

ಪಂದ್ಯಾಟದ ಉದ್ಘಾಟನೆಯನ್ನು ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಮೊಕ್ತೇಸರರಾದ ಪದ್ಮನಾಭ ಕಾಮತ್ ನಡೆಸಿ ಉತ್ತಮವಾಗಿ ಪಂದ್ಯಾಟವನ್ನು ಆಡುವುದರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಿ ಎಂದರು. ಸುರೇಶ ಕಾಮತ್, ಪ್ರಕಾಶ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

7 − 2 =