ಕೊಲ್ಲೂರಿನಲ್ಲಿ ಸಚಿವ ಡಿಕೆಶಿ ಚಂಡಿಕಾಹೋಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸಕುಟುಂಬಿಕ ರಾಗಿ ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು.

Click Here

Call us

Call us

ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಜನಾರ್ದನ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ, ಸಮಿತಿ ಸದಸ್ಯರಾದ ರಮೇಶ್‌ ಗಾಣಿಗ ಕೊಲ್ಲೂರು, ನರಸಿಂಹ ಹಳಗೇರಿ, ಜಿಲ್ಲಾ ಸಹಕಾರಿ ಯುನಿಯನ್‌ ಅಧ್ಯಕ್ಷ ಕಿಶನ್‌ ಹೆಗ್ಡೆ, ಅರ್ಚಕ ಡಾ| ಕೆ.ಎನ್‌. ನರಸಿಂಹ ಅಡಿಗ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ ಶೆಟ್ಟಿ, ತಾ.ಪಂ. ಸದಸ್ಯೆ ಗ್ರೀಷ್ಮಾ ಭಿಡೆ, ಬೈಂದೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಶೇಖರ ಪೂಜಾರಿ, ಸನತ್‌ ಬಳೆಗಾರ, ವಾಸುದೇವ ಯಡಿಯಾಳ, ದೇವದಾಸ್‌, ಪಿ.ಎಲ್‌. ಜೋಸ್‌, ರಂಗ ನಾಯ್ಕ ಮೊದಲಾದವರು ಸಚಿವರನ್ನು ಸ್ವಾಗತಿಸಿ ಗೌರವಿಸಿದರು. ಮೆಸ್ಕಾಂ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Click here

Click Here

Call us

Visit Now

ಸಬ್‌ಸ್ಟೇಶನ್‌ಗೆ ಮನವಿ
ಇದೇ ಸಂದರ್ಭ ಕಾಂಗ್ರೆಸ್‌ ಮುಖಂಡ, ಕೊಲ್ಲೂರು ದೇಗುಲ ಸಮಿತಿ ಸದಸ್ಯ ರಮೇಶ್‌ ಗಾಣಿಗ ಅವರ ನೇತೃತ್ವದಲ್ಲಿ ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸದಸ್ಯರು ಹಾಗೂ ಗ್ರಾಮಸ್ಥರು ಸಚಿವ ಶಿವಕುಮಾರ್‌ ಹಾಗೂ ಶಾಸಕ ಗೋಪಾಲ ಪೂಜಾರಿ ಅವರನ್ನು ಭೇಟಿಯಾಗಿ ಕೊಲ್ಲೂರಿನ ಲೋ ವೋಲ್ಟೆಜ್‌ ಸಮಸ್ಯೆ ಪರಿಹಾರಕ್ಕೆ ಹಾಲ್ಕಲ್‌ ಸಮೀಪ ಎಲ್ಲೂರಿನಲ್ಲಿ ಸಬ್‌ಸ್ಟೇಶನ್‌ಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

four + five =