ಕೊಲ್ಲೂರು ರಥೋತ್ಸವ ಧ್ವಜಾರೋಹಣ, ಉತ್ಸವಕ್ಕೆ ಚಾಲನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರಿನಲ್ಲಿ ಮಾ. 20ರಂದು ನಡೆಯಲಿರುವ ರಥೋತ್ಸವದ ಅಂಗವಾಗಿ ಮಾ. 13ರಂದು ಗಣಪತಿ ಪ್ರಾರ್ಥನೆ, ನಾಂದಿ, ಪುಣ್ಯಾಹ, ಅಂಕುರಾಧಿವಾಸ, ಸಿಂಹಯಾಗದೊಡನೆ ರಥೋತ್ಸವದ ಧ್ವಜಾರೋಹಣ ಕಾರ್ಯ ಕ್ರಮ ನಡೆಯಿತು. ದೇಗುಲದ ತಂತ್ರಿ ರಾಮಚಂದ್ರ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿದವು.

Call us

Call us

ಭಕ್ತರ ಸಮ್ಮುಖದಲ್ಲಿ ಕೌತುಕ ಬಂಧನ, ಮುಹೂರ್ತ ಬಲಿ, ಭೇರಿತಾಡನ ಉತ್ಸವ ಜರಗಿತು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಸ್‌. ಯೋಗೇಶ್ವರ, ಉಪಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಹಾಗೂ ಅರ್ಚಕರ ಸಮ್ಮುಖದಲ್ಲಿ ರಥೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Leave a Reply

Your email address will not be published. Required fields are marked *

2 + 19 =