ಕೇಮಾರು ಶ್ರೀ ನೇತೃತ್ವದಲ್ಲಿ 108ಆರತಿಯ ಗಂಗಾಪೂಜೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಉಪ್ಪುಂದ ಮಡಿಕಲ್ ಅರಮಕೋಡಿ ಶ್ರೀ ಈಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ ಉಪ್ಪೊಂದೋತ್ಸವದ ಅಂಗವಾಗಿ ಮಡಿಕಲ್ ಕಡಲ ತೀರದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ಋತ್ವಿಜರಿಂದ ವೇದಘೋಷ ಸಹಿತಾ 108 ಆರತಿಯ ಗಂಗಾಪೂಜೆ ನೇರವೇರಿತು.

Call us

Click Here

Click here

Click Here

Call us

Visit Now

Click here

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಅರಮಕೋಡಿ ಈಶ್ವರ ಸೇವಾ ಸಮಿತಿಯ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಐ. ನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕುಮಾರ ಬಿ.ಎಚ್.ಕೆ, ಉಪ್ಪುಂದ ಮಡಿಕಲ್ ರಾಣಿಬಲೆ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉದ್ಯಮಿ ರಾಮ ಕೆ., ಈಶ್ವರ ಸೇವಾ ಸಮಿತಿಯ ಅಧ್ಯಕ್ಷ ಮುರುಳೀಧರ್ ಉಪಸ್ಥಿತರಿದ್ದರು. ಗೋಪಾಲ ಸ್ವಾಗತಿಸಿ, ಪ್ರಸನ್ನ ಕುಮಾರ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಬಾಗಲಕೋಟೆ ತುಳಸಿಗೇರಿ ಕುವೆಂಪು ಶತಮಾನೋತ್ಸವ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ ನಡೆಯಿತು. ಬಳಿಕ ಉಪ್ಪುಂದ ಅರೆಹಾಡಿಯ ಶ್ರೀ ಜಟ್ಟಿಗೇಶ್ವರ ಯಕ್ಷಗಾನ ಕಲಾ ಸಂಘದ ಮಕ್ಕಳಿಂದ ನೃತ್ಯ ಮತ್ತು ಖ್ಯಾತ ಕಲಾವಿದರಿಂದ ಅರ್ಥಗಾರಿಕೆ ಯಕ್ಷ ನಾಟ್ಯ, ತಾಳ, ಮೇಳ, ಶಿವಾನುಗ್ರಹ ನೆರವೇರಿತು.

Kemaru Shree Ganga Pooja at Uppunda Uppundotsava (5) Kemaru Shree Ganga Pooja at Uppunda Uppundotsava (7) Kemaru Shree Ganga Pooja at Uppunda Uppundotsava (2) Kemaru Shree Ganga Pooja at Uppunda Uppundotsava (3)

Leave a Reply

Your email address will not be published. Required fields are marked *

4 × 5 =