ಕೇರಳ, ಕರ್ನಾಟಕಕ್ಕೆ ಸಹಾಯ ಹಸ್ತ ಚಾಚಿದ ಕತಾರ್‌ನ ಭಾರತೀಯರು

Click Here

Call us

Call us

ಕುಂದಾಪ್ರ ಡಾಟ್ ಕಾಂ’ ಸುದ್ದಿ
ಭಾರತೀಯ ದೂತಾವಾಸದಡಿಯಲ್ಲಿ ಕಾರ್ಯವಹಿಸುತ್ತಿರುವ ಭಾರತೀಯ ಸಮುದಾಯದ ಸೇವಾ ಸಂಸ್ಥೆಯ ಅಡಿಯಲ್ಲಿ (ಇಂಡಿಯನ್ ಕಮ್ಯೂನಿಟಿ ಬೇನೆವೋಲೆಂಟ್ ಫೋರಮ್-Iಅಃಈ ) ಪ್ರವಾಹ ಪೀಡಿತ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಪ್ರವಾಹ ಪೀಡಿತರಿಗೆ ಧನ ಸಂಗ್ರಹಣೆ ಮಾಡಿ ದೇಣಿಗೆ ನೀಡುವ ಮೂಲಕ ಕತಾರ್ ದೇಶದಲ್ಲಿರುವ ಭಾರತದ ರಾಜ್ಯಗಳ ಸಂಘ ಸಂಸ್ಥೆಗಳು ಹೃದಯವಂತಿಕೆ ಮೆರೆದಿದ್ದಾರೆ. ಭಾರತೀಯ ರಾಯಭಾರಿಯಾದ ಪಿ. ಕುಮರನ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಅಭಿಯಾನಕ್ಕೆ ಭಾರತದ ನಾಗರೀಕರೆಲ್ಲ ಉದಾರವಾಗಿ ಸಹಾಯ ಹಸ್ತ ಚಾಚಿದ್ದಾರೆ.

Call us

Call us

Click Here

Visit Now

ಕತಾರ್ ದೇಶದಿಂದ ಆಗಮಿಸಿದ್ದ ಪ್ರತಿನಿಧಿಗಳಾದ ಐಸಿಬಿಎಫ್ ಕಾರ್ಯದರ್ಶಿ ಮಹೇಶ್ ಗೌಡ ಮುಂದಾಳತ್ವದಲ್ಲಿ ಅವರ ಜೊತೆಯಾಗಿ ಮಿಲನ್ ಅರುಣ್, ಅಧ್ಯಕ್ಷರು ಭಾರತೀಯ ಸಾಂಸ್ಕೃತಿಕ ಸಂಸ್ಥೆ, ಐಸಿಬಿಎಫ್ ಮತ್ತು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರೂ ಆದ ಅರವಿಂದ್ ಪಾಟೀಲ್, ಕರ್ನಾಟಕ ಸಂಘದ ಉಪಾಧ್ಯಕ್ಷರಾದ ರವಿ ಶೆಟ್ಟಿ ಹಾಗೂ ಕರ್ನಾಟಕ ಸಂಘ ಕತಾರ್ ಮಾಜಿ ಉಪಾಧ್ಯಕ್ಷರೂ ಹಾಗೂ ಕತಾರ್‌ದಲ್ಲಿ ಕನ್ನಡ ಚಲನಚಿತ್ರಗಳ ವಿತರಕರಾದ ಸುಬ್ರಮಣ್ಯ ಹೆಬ್ಬಾಗಿಲು ಇವರೆಲ್ಲರೂ ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹದಿನೈದು ಲಕ್ಷಗಳ ಚೆಕ್ಕನ್ನು ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿದರು.

Click here

Click Here

Call us

Call us

ಕತಾರ್ ಪ್ರತಿನಿಧಿಗಳಾದ ಅರವಿಂದ ಪಾಟೀಲ್, ಸುಬ್ರಮಣ್ಯ ಹೆಬ್ಬಾಗಿಲು, ಮಹೇಶಗೌಡ, ಮಿಲನ ಅರುಣ್ ಮತ್ತು ರವಿ ಶೆಟ್ಟಿ ಡಿ ಡಿ ಹಸ್ತಾಂತರಿಸಿದರು.

ಭಾರತದ ರಾಯಭಾರಿಯಾದ ಪಿ. ಕುಮರನ್ ಅವರು ಡಿ.ಡಿಯನ್ನು ಐಸಿಬಿಎಫ್ ಕಾರ್ಯದರ್ಶಿಗಳಾದ ಮಹೇಶಗೌಡ ಅವರಿಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

two × five =