ಕೊಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಪ್ರತಿಷ್ಟಾ ವರ್ಧಂತಿ

Call us

Call us

ಕುಂದಾಪುರ: ಕೊಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಪ್ರತಿಷ್ಟಾ ವರ್ಧಂತಿ ವಿಜೃಂಬಣೆಯಿಂದ ನಡೆಯಿತು. ಬೆಳಿಗ್ಗೆ ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಶತಕಲಶಾಭಿಷೇಕ, ಪವಮಾನ ಕಲಶಾಭಿಷೇಕಗಳೊಂದಿಗೆ ವಿಶೇಷ ಪೂಜೆ ಜರಗಿತು.ಮಧ್ಯಾಹ್ನ ಮಹಾಸಂತರ್ಪಣೆ ನಡೆಯಿತು.

Call us

Call us

Call us

ಈ ಸಮಯದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಕಾಮತ್, ಮೊಕ್ತೇಸರರಾದ ಶಾಂತಾರಾಮ ಪೈ, ವಿಠ್ಠಲದಾಸ ಭಟ್, ರತ್ನಾಕರ ಕಾಮತ್, ಗೋವಿಂದ್ರಾಯ ಸಂಜೀವ ಕಾಮತ್, ಪದ್ಮನಾಭ ಕಾಮತ್, ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಶಂಕರ ಕಾಮತ್ ಉಪಸ್ಥಿತರಿದ್ದರು.

ಸಂಜೆ ಹಗಲೋತ್ಸವ,ರಾತ್ರಿ ಭಜನೆಯೊಂದಿಗೆ ಬೆಳ್ಳಿಯ ಪುಷ್ಪ ರಥ ಸಹಿತ ಉತ್ಸವ ಕೋಟೇಶ್ವರ ಪೇಟೆಯಲ್ಲಿ ಸಾಗಿತು.ನಂತರ ವಿಶೇಷ ವಸಂತ ಪೂಜೆ ಮತ್ತು ಪ್ರಸಾದ ವಿತರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಊರ ಸಮಾಜ ಭಾಂಧವರು ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕ ಪಾತ್ರರಾದರು

Leave a Reply

Your email address will not be published. Required fields are marked *

five × 4 =