ಕೊಪ್ಪಳ ಜಿಲ್ಲಾ ಉತ್ಸವ ದಶಮಾನೋತ್ಸವ: ಉಡುಪಿ,ದ.ಕ. ಕಾಸರಗೋಡು ಮುಂಬೈನ 12 ಮಂದಿಗೆ ಪ್ರಶಸ್ತಿ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಪ್ಪಳ: ಕೊಪ್ಪಳ ಜಿಲ್ಲಾ ನಾಗರೀಕರ ಸಾಂಸ್ಕೃತಿಕ ವೇದಿಕೆ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಮತ್ತು ಸಂಘ ಸಂಸ್ಥೆಗಳು ಆಯೋಜಿಸುತ್ತಿರುವ ಕೊಪ್ಪಳ ಜಿಲ್ಲಾ ಉತ್ಸವದ ದಶಮಾನೋತ್ಸವದಲ್ಲಿ ಉಡುಪಿಯ ಸಮಾಜ ಸೇವಕ ಉಡುಪಿ ವಿಶ್ವನಾಥ ಪೈ, ಹಿರಿಯ ಕವಿಗಳಾದ ಅಂಶುಮಾಲಿ, ಡಾ.ವಸಂತ ಕುಮಾರ್, ಶೇಖರ ಅಜೆಕಾರು ಸಹಿತ ಹನ್ನೆರಡು ಮಂದಿಗೆ ದಶಮಾನೋತ್ಸವ ಮತ್ತು ಡಾ. ಸಿದ್ದಯ್ಯ ಪುರಾಣಿಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Call us

Click Here

Click here

Click Here

Call us

Visit Now

Click here

ಜಿಲ್ಲೆಗಳ ನಡುವೆ ಸೌಹಾರ್ದ ಬೆಳಸಲು ದಶಮಾನೋತ್ಸವಕ್ಕೆ ಕರಾವಳಿಯ ಉಡುಪಿ, ದ.ಕ, ಕಾಸರಗೋಡು ಮತ್ತು ಮುಂಬಯಿಯ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದಶಮಾನೋತ್ಸವ ಗೌರವ: ವಿಶ್ವನಾಥ ಶೆಣೈ ಸಮಾಜ ಸೇವಕರು-ಉಡುಪಿ, ವಿ.ಕೆ.ಸುವರ್ಣ -ರಂಗ ಕಲಾವಿದರು ಮುಂಬಯಿ, ಶೇಖರ ಅಜೆಕಾರು, ಪತ್ರಕರ್ತರು-ಉಡುಪಿ, ಚಿತ್ತೂರು ಪ್ರಭಾಕರ ಆಚಾರ್ಯ- ಅಧ್ಯಕ್ಷರು ಕಾರ್ಯ ನಿರತ ಪತ್ರಕರ್ತರ ಸಂಘ ಬ್ರಹ್ಮಾವರ, ಎಸ್.ಆರ್. ಬಂಡಿಮಾರ್- ಸಂಪಾದಕರು-ಟೈಮ್ಸ್ ಆಫ್ ಕುಡ್ಲ ತುಳುವಾರ ಪತ್ರಿಕೆ, ವಸಂತಕುಮಾರ್ ಬೆಳ್ತಂಗಡಿ- ವ್ಯವಸ್ಥಾಪಕ ಸಂಪಾದಕರು ಜನಬಿಂಬ ವಾರಪತ್ರಿಕೆ ಕಾರ್ಕಳ, ರೆಮೊನಾ ಇವೆಟ್ ಪಿರೇರಾ ಕಲಾವಿದೆ – ಮಂಗಳೂರು ಅವರು ಆಯ್ಕೆ ಯಾಗಿದ್ದಾರೆ.

ಡಾ.ಸಿದ್ಧಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ: ಮಂಗಳೂರು ಆಕಾಶವಾಣಿಯ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ, ಹಿರಿಯ ಕವಿ ಅಂಶುಮಾಲಿ ಮಣಿಪಾಲ-ಉಡುಪಿ, ಕವಿ-ತುಳುನಾಡ ಟೈಮ್ಸ್ ದೈನಿಕ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ಉಳಿಯತಡ್ಕ, ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಹಾಗೂ ಯುವ ಕವಯತ್ರಿ ಅಶ್ವಿನಿ.ಬಿ.ಕೆ ಉಗ್ರಾಣಿಕಟ್ಟೆ, ದೊಂಡರಂಗಡಿ ಆಯ್ಕೆಯಾಗಿದ್ದಾರೆ. ಐದು ದಿನಗಳ ಕೊಪ್ಪಳ ಜಿಲ್ಲಾ ಉತ್ಸವ ಆಗಸ್ಟ್ 24 ರಿಂದ 5 ದಿನಗಳ ಕಾಲ ನಡೆಯುತ್ತಿದ್ದು 26 ರಂದು ಸಂಜೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಸಮ್ಮೇಳನದ ಪ್ರಧಾನ ಸಂಚಾಲಕ ಮಹೇಶ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

five + 8 =