ಕೊರಗ ಕಾಲೋನಿಯಲ್ಲಿ ಪ್ರೇಮಿಗಳಿಗೆ ಕಂಕಣ ಭಾಗ್ಯ

ಕುಂದಾಪುರ: ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದ ಪರಿಶಿಷ್ಟ ಜಾತಿಯ ಯುವಕ ಮತ್ತು ಪರಿಶಿಷ್ಟ ಪಂಗಡ (ಕೊರಗ) ಯುವತಿಗೆ ಭಾನುವಾರ ತಾಲೂಕು ಕೊರಗ ಶ್ರೇಯೋಭಿವದ್ಧಿ ಸಂಘದ ನೇತತ್ವದಲ್ಲಿ ಭಾನುವಾರ ಕುಂಭಾಸಿ ಕೊರಗ ಕಾಲೋನಿಯ ಅಂಬೇಡ್ಕರ ಭವನದಲ್ಲಿ ಮದುವೆ ನೆರವೇರಿಸಲಾಯಿತು. ಪರಿಶಿಷ್ಟ ಜಾತಿಗೆ ಸೇರಿರುವ ಹೆಮ್ಮಾಡಿಯ ನಿವಾಸಿ ಅಚ್ಯುತ(27) ಹಾಗೂ ನಾಗೂರಿನ ಕೊರಗ ಯುವತಿ ಪುಷ್ಪಾ(21) ಸತಿಪತಿಗಳಾದರು.

ಪುಷ್ಪಾ ಕುಂದಾಪುರ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿ ಯಾಗಿದ್ದು ಅಚ್ಯುತ ಗಾರೆವತ್ತಿ ಮಾಡಿಕೊಂಡಿದ್ದ. 4 ವರ್ಷದ ಹಿಂದೆ ಪರಸ್ಪರ ಭೇಟಿಯಾದ ಇವರು ಪ್ರೀತಿಸಲು ಆರಂಭಿಸಿದ್ದರು. ಮದುವೆಗೆ ಮನೆಯವರ ವಿರೋಧವಿತ್ತು. ಕೊರಗ ಸಂಘಟನೆಗಳ ಗಮನಕ್ಕೆ ವಿಷಯ ತಲುಪಿದ್ದು ಸಂಘಟನೆಯವರು ಪ್ರೇಮಿ ಗಳನ್ನು ಭೇಟಿ ಮಾಡಿ ಧೈರ್ಯ ತುಂಬಿ ಮದುವೆ ಮಾಡಿಸುವ ಭರವಸೆ ನೀಡಿದರು. ಅದರಂತೆ ಅಂಬೇಡ್ಕರ್ ಭವನದಲ್ಲಿ ಸರಳ ವಿವಾಹ ನೆರವೇರಿಸಲಾಯಿತು.

ಸಂಪ್ರದಾಯಿಕವಾಗಿ ನಡೆದ ಈ ಸರಳ ವಿವಾಹದಲ್ಲಿ ವರ 101 ರೂಪಾಯಿಯನ್ನು ವಧುದಕ್ಷಿಣೆಯಾಗಿ ನೀಡಿದರು. ವಧುವರರನ್ನು ಡೋಲುವಾದನದ ಮೂಲಕ ಮದುವೆ ಮಂಟಪಕ್ಕೆ ಕರೆತರಲಾಯಿತು. ಮಾಂಗಲ್ಯ ಧಾರಣೆ ಬಳಿಕ ಶುಭ ಹಾರೈಕೆ ನೆರವೇರಿತು. ಬಳಿಕ ವಧುವರರು ಜೀವನುದ್ದಕ್ಕೂ ಜತೆಯಾಗಿ ಬಾಳುವ ಪ್ರಮಾಣವಚನ ಸ್ವೀಕರಿಸಿದರು.

ತಾಲೂಕು ಕೊರಗ ಶ್ರೇಯೋಭಿವದ್ಧಿ ಸಂಘದ ಅಧ್ಯಕ್ಷ ವಿ.ಗಣೇಶ್, ಕುಂಭಾಸಿ ಗ್ರಾ.ಪಂ. ಅಧ್ಯಕ್ಷ ಗೋವಿಂದ ಪುತ್ರನ್, ಕೊರಗ ಮುಖಂಡರಾದ ಗಣೇಶ್ ಬಾರ್ಕೂರು, ಲಕ್ಷ್ಮಣ, ಶೇಖರ ಮರವಂತೆ, ದಲಿತ ಮುಖಂಡ ಗೋಪಾಲಕಷ್ಣ ಮಕ್ಕಳ ಮನೆಯ ಮಕ್ಕಳು ಇದ್ದರು. ಬಳಿಕ ಭೋಜನಕೂಟ ನಡೆಯಿತು.

Leave a Reply

Your email address will not be published. Required fields are marked *

5 + 18 =