ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ತಾಲೂಕು ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಸಮಾವೇಶ ಜರಗಿತು.
ಅಖಿಲ ಭಾರತ ಕೃಷಿಕೂಲಿಕಾರರ ಸಂಘ(AIAWU)ದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೊಲ್ಲೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಉದ್ಯೊಗ ಚೀಟಿಗಾಗಿ ಕೂಲಿಕಾರರು ಸಲ್ಲಿಸಿದ ಅಜಿ೯ಗೆ ಅನುಸಾರವಾಗಿ ಈ ಕೂಡಲೇ ಉದ್ಯೊಗ ಚೀಟಿ ಕೊಟ್ಟು,ನರೇಗಾ ಕೆಲಸ ಕೊಡಲು ಕ್ರಮ ವಹಿಸಬೇಕು ಎಂದು ಸ್ಥಳೀಯಾಡಳಿತವನ್ನು ಆಗ್ರಹಿಸಿದರು.
ಈ ಸಂದರ್ಭ ಕೊಲ್ಲೂರು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕ ಸಂಘದ ಅಧ್ಯಕ್ಷ ನರಸಿಂಹ ಆಚಾರ್, ಮಧು, ಅಂಬಿಕಾ ಬಾಳಿಗ, ಡಾ. ಬಿ. ವಿ. ಬೇಬಿ ಹಾಲ್ಕಲ್ ಉಪಸ್ಥಿತರಿದ್ದರು. ರೇಣುಕಾ ಧನ್ಯವಾದ ಗೈದರು.