ಕೊಲ್ಲೂರು ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ

Call us

Call us

Call us

Call us

ಕುಂದಾಪುರ: ನಿಧಿಷ್ಟ ಗುರಿಯ ಹಿಂದೆ ಮಾತಾ-ಪಿತೃ ಗುರು ಭಕ್ತಿ ಮತ್ತು ಸಕಾರಾತ್ಮಕ ಚಿಂತೆಯ ಕೊರತೆಯಿಂದ ಸದೃಢ ಸಮಾಜ ನಿರ್ಮಿಸಲು ಧಕ್ಕೆಯಾಗಿದೆ. ಸೇವಾ ಮನೋಭಾವನೆಯ ಮೂಲಕ ಸಧ್ವಾವ-ಸದ್ಗುಣಗಳನ್ನು ಮೈಗೂಡಿಸಿಕೊಂಡು ಗುರುತ್ವ ಜಾಗೃತೆಯಿಂದ ಸಾಂಸ್ಕೃತಿಕ ಮೌಲ್ಯಗಳು ಏಳಿಗೆ ಸಾದ್ಯ ಎಂದು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಡಾ. ಉದಯ ಕುಮಾರ್ ಶೆಟ್ಟಿ ಹೇಳಿದರು.

Call us

Click Here

Click here

Click Here

Call us

Visit Now

Click here

ಅವರು ಉಡುಪಿ ಜಿಲ್ಲಾ ಪಂಚಾಯಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳುಂಜೆ ಶಂಕರನಾರಾಯಣ ಇಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು,ಕೊಲ್ಲೂರು ಶ್ರೀ ಮೂಕಾಂಬಿಕ ದೇವಳ ಸ್ವತಂತ್ರ ಪ.ಪೂ.ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದದಲ್ಲಿ ‘ಪ್ರಸ್ತುತ ಸನ್ನಿವೇಶದಲ್ಲಿ ಸಾಂಸ್ಕೃತಿಕ ಮೌಲ್ಯಗಳ ಮಹತ್ವ’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಭ್ರಷ್ಟಾಚಾರ ಬಿಟ್ಟರೆ ಭಾರತಕ್ಕೆ ಸಾಂಸ್ಕೃತಿಕ ಮೌಲ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ ಆದರೆ, ಟಿವಿಯಲ್ಲಿ ಬರುವ ಅಸಂಬದ್ಧ ಕಾರ್ಯಕ್ರಮಗಳ ವೀಕ್ಷಣೆ, ಹೋಲಿಕೆಯ ಜೀವನದಿಂದ ಆಸೆ-ದುರಾಸೆಗಳಿಗೆ ಒಳಗಾಗಿ ಒತ್ತಡದಿಂದ ಹೊರಗೆ ಬರಬೇಕಾದರೆ ಬುದ್ಧಿ, ಮನಸ್ಸು, ಮತ್ತು ಇಂದ್ರಿಯಗಳನ್ನು ನಿಯಂತ್ರಿಸಿ ಯೋಗದ ಮೊರೆ ಹೋದಾಗ ಮೌಲ್ಯಗಳನ್ನು ಉಳಿಸಿ ಉನ್ನತ ಮಟ್ಟದ ಸಾಧನೆ ಮಾಡಬಹುದು ಎಂದರು. ಶಂಕರನಾರಾಯಣ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ ನಾಯ್ಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದ ನಿರ್ದೇಶಕ, ಕಾಲೇಜಿನ ಪ್ರಾಂಶುಪಾಲ ಅರುಣ ಪ್ರಕಾಶ ಶೆಟ್ಟಿ ಮಾತನಾಡಿ,‘ ನಾನು’‘ ನನ್ನದು’ ಎಂಬ ಭಾವ ಬಿಟ್ಟು ನನ್ನದಲ್ಲಾ ಎಂಬ ಮನೋಭಾವನೆಯಿಂದ ಸೇವೆಯ ಮೂಲಕ ಸಮರ್ಪಣಾ ಮನೋಭಾವನೆ ಬೆಳೆಸಿಕೊಳ್ಳಿ ಎಂದರು.

ಸಭೆಯಲ್ಲಿ ದೈಹಿಕ ಶಿಕ್ಷಕ ಸಣ್ಣಯ್ಯ ನಾಯ್ಕ್, ಅಮ್ಮಯ್ಯ ನಾಯ್ಕ್ ಹಾರ‍್ಗೆದ್ದೆ, ಶಿಬಿರಾಧಿಕಾರಿ ನಾಗರಾಜ ಅಡಿಗ, ಎಮ್, ವಾಸುದೇವ ಉಡುಪ, ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ, ಗೋಪಾಲಕೃಷ್ಣ.ಜಿ.ಬಿ ಉಪಸ್ಥಿತರಿದ್ದರು. ನಂತರ ಪೆಟ್ರೋಲಿಯಂ ಮತ್ತು ಗ್ಯಾಸ್ ಉತ್ಪನ್ನದ ಬಗ್ಗೆ ರಘು ಹೆಗ್ಡೆ ಅವರಿಂದ ಪ್ರಾತ್ಯಕ್ಷತೆ ನಡೆಯಿತು. ನಯನಾ.ಎಸ್.ಎನ್ ಸ್ವಾಗತಿಸಿದರು. ಪುಷ್ಪರಾಣಿ ಸ್ವಾಗತಿಸಿದರು. ಸುಕೇಶ್ ವಂದಿಸಿದರು.

Call us

Leave a Reply

Your email address will not be published. Required fields are marked *

one + one =