ಕೊಲ್ಲೂರು: ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಸ್ವಾರ್ಥ ರಾಜಕಾರಣ ಮಾಡಿಲ್ಲ – ಮಾಜಿ ಪ್ರಧಾನಿ ದೇವೇಗೌಡ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

Call us

ಕೊಲ್ಲೂರು: ಕರ್ನಾಟಕದ ರೈತರ ಹಿತದೃಷ್ಠಿಯಿಂದ ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಂಡು ಸತ್ಯಾಗ್ರಹ ಮಾಡಿದ್ದೇನೆಯೇ ಹೊರತು ಇದರಲ್ಲಿ ನನ್ನ ಸ್ವಾರ್ಥ ರಾಜಕೀಯ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

Call us

Call us

ಅವರು ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆಯುವ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ದ್ವಿಸದಸ್ಯ ಪೀಠಕ್ಕೆ ರಾಜ್ಯ ಸರಕಾರ ಸರಿಯಾಗಿ ಮನರಿಕೆ ಮಡಿಕೊಡದ ನೆಲೆಯಲ್ಲಿ ನ್ಯಾಯಾಲಯ ನೀಡಿದ ತೀರ್ಪು ಹಲವರು ಗೊಂದಲಗಳಿಗೆ ಕಾರಣವಾಗಿತ್ತು. ಈಗ ಅಧ್ಯಯನ ತಂಡ ನೀಡಿದ ವರದಿಯನ್ನು ತ್ರಿಸದಸ್ಯ ಪೀಠದಿಂದ ವಿಚಾರಣೆ ನಡೆಯಬೇಕಾಗಿದೆ. ಯವುದೇ ರೀತಿಯ ಸಂಧಾನ ಫಲಕಾರಿಯಾಗದು ಎಂದರು.

ಕಾವೇರಿ ನೀರಿನ ಹಂಚಿಕೆಯ ಹೋರಾಟ 1993ರಿಂದ ಪ್ರಾರಂಭಗೊಡಿದ್ದು, ಈವರೆಗೂ ಅಂತ್ಯ ಕಂಡಿಲ್ಲ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದು, ತಕ್ಷಣ ಸ್ಪಂದಿಸಿದ ಅವರು ಅಟಾರ್ನಿ ಜನರಲ್ ಹಾಗೂ ನಾಲ್ಕು ರಾಜ್ಯಗಳ ಅಧಿಕಾರಿಗಳಿರುವ ಅಧ್ಯಯನ ತಂಡವನ್ನು ಜಲಾಶಯಗಳ ಸ್ಥಿತಿಗತಿಯ ಪರಿಶೀಲನೆಗಾಗಿ ಕಳುಹಿಸಿ ಸಮಗ್ರ ವರದಿ ನೀಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ ಎಂದರು.

ಭಯೋತ್ಪಾದಕರ ವಿರುದ್ದ ಪ್ರಧಾನಿ ತೆಗೆದುಕೊಂಡ ನಿರ್ಣಯವನ್ನು ಶ್ಲಾಘಿಸಿದ ಅವರು, ಈ ಬಗೆಯ ಕಾರ್ಯಾಚರಣೆಗಳಿಗೆ ಹೆಚ್ಚು ಪ್ರಚಾರ ನೀಡುವುದು ಭದ್ರತೆಯ ದೃಷ್ಠಿಯಿಂದ ಒಳ್ಳಯದಲ್ಲ ಎಂದು ನುಡಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ದಕ್ಷತ್ ಆರ್. ಶೆಟ್ಟಿ, ಪಕ್ಷದ ಮುಖಂಡರಾದ ಶ್ರೀಕಾಂತ್ ಅಡಿಗ ಕೊಲ್ಲೂರು, ಸಬ್ಲಾಡಿ ಮಂಜಯ್ಯ ಶೆಟ್ಟಿ, ಕಾಪು ಯೋಗೇಶ್ ಶೆಟ್ಟಿ, ರಂಜಿತ್‌ಕುಮರ್ ಶೆಟ್ಟಿ ಉಪ್ಪುಂದ, ಕೆಂಚನೂರು ಶಾಲಿನಿ ಶೆಟ್ಟಿ, ಮನ್ಸೂರ್ ಇಬ್ರಾಹಿಂ ಮರವಂತೆ, ಬಿ. ಟಿ. ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

4 × 2 =