ಕೊಲ್ಲೂರು ದೇವಳಕ್ಕೆ ಬಹುಭಾಷಾ ನಟ ಅರ್ಜುನ್ ಸರ್ಜಾ ಭೇಟಿ

Call us

Call us

ಕೊಲ್ಲೂರು: ಬಹು ಭಾಷಾನಟ ಕನ್ನಡದ ಅರ್ಜುನ್ ಸರ್ಜಾ ಇಂದು ಕುಟುಂಬ ಸಮೇತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅರ್ಜುನ್ ಸರ್ಜಾ ತಮ್ಮ ಪತ್ನಿ ನಿವೇದಿತಾ ಅರ್ಜುನ್, ಹಿರಿಯ ಪುತ್ರಿ ಐಶ್ವರ್ಯ ಅತ್ತೆ ಗೀತಾರೊಂದಿಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದಲ್ಲಿಯೇ ಅನ್ನಪ್ರಸಾದವನ್ನು ಸ್ವೀಕರಿಸಿದರು.

Call us

Call us

Visit Now

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕ್ರಷ್ಣಪ್ರಸಾದ ಅಡ್ಯಂತಾಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ ಮೊದಲಾದವರು ಉಪಸ್ಥಿತರಿದ್ದು ಅರ್ಜುನ್ ಸರ್ಜಾ ದಂಪತಿಗಳನ್ನು ಹಾಗೂ ಕುಟುಂಬಿಕರನ್ನು ಬರಮಾಡಿಕೊಂಡರು.

Click here

Call us

Call us

ಬಾಲನಟನಾಗಿ ಕನ್ನಡದ ಚಿತ್ರರಂಗ ಪ್ರವೇಶಿಸಿದ ಅರ್ಜುನ್ ಸರ್ಜಾ ಅವರಿಗೆ ಮಂದೆ ತಮಿಳು ಚಿತ್ರರಂಗ ಅವಕಾಶದ ಬಾಗಿಲು ತೆರೆದಿತ್ತು. ಶಿವರಾಜಕುಮಾರ್ ಅವರೊಂದಿಗೆ ನಟಿಸಿದ್ದ ನಿವೇದಿತಾ ಮದುವೆಯ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಈಗ ಇವರ ಪುತ್ರಿ ಐಶ್ವರ್ಯ ಇತ್ತಿಚಿಗೆ ಕಾಲಿವುಡ್ ಮೂಲಕ ಸಿನೆಮಾ ಜಗತ್ತಿಗೆ ಪ್ರವೇಶಿಸಿದ್ದಳು.

Leave a Reply

Your email address will not be published. Required fields are marked *

nine + 2 =