ಕುಂದಾಪ್ರ ಡಾಟ್ ಕಾಂ ವರದಿ
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಚಿನ್ನಾಭರಣ ಕಳವು ಪ್ರಕರಣದ ತನಿಕೆ ಮುಂದುವರಿದ್ದು ಸುಮಾರು 60ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವುದು ಸಷ್ಟವಾಗಿದೆ. ಪ್ರಕರಣದ ಆರೋಪಿ ಶಿವರಾಮ ಮಡಿವಾಳನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಯ ತನಿಕೆ ನಡೆಸುತ್ತಿದ್ದು ಪ್ರಕರಣದ ಒಂದೊಂದೇ ಮಾಹಿತಿಗಳು ಬೆಳಕಿಗೆ ಬರುತ್ತಿದೆ.
[quote font_size=”16″ bgcolor=”#ffffff” bcolor=”#dd9933″ arrow=”yes” align=”right”]* ಕೊಲ್ಲೂರು ದೇವಳದ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿಚಾರಣೆ ಪ್ರಗತಿಯಲ್ಲಿದ್ದು, ಸ್ವಲ್ಪ ಪ್ರಮಾಣದ ಒಡವೆಗಳನ್ನು ಈಗಾಗಲೇ ವಶಪಡೆಡಿದ್ದು ಉಳಿದವುಗಳನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟಿರುವ ಬಗ್ಗೆ ಆಪಾದಿತನಿಂದ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲಿಯೇ ಅವುಗಳನ್ನು ಸ್ವಾದೀನಪಡಿಸಿಕೊಳ್ಳುವುದರೊಂದಿಗೆ ಈ ಕೃತ್ಯದಲ್ಲಿ ಆತನೊಂದಿಗೆ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಕೆ ನಡೆಸಲಾಗುತ್ತಿದೆ. – ಕೆ. ಅಣ್ಣಾಮಲೈ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.[/quote]
ದೇವಳದ ತಿಜೋರಿಯಲ್ಲಿದ್ದ ಒಟ್ಟು 48 ಬಗೆಯ ಒಡವೆಗಳ ಪೈಕಿ ಒಟ್ಟು 9 ನಮೂನೆಯ ಚಿನ್ನಾಭರಣ ಪೂರ್ಣ ಪ್ರಮಾಣದಲ್ಲಿ ಹಾಗೂ 2 ಬಗೆಯ ಚಿನ್ನಾಭರಣ ಭಾಗಶಃ(ಕೆಲವು ಗ್ರಾಂ ಮಾತ್ರ) ತಿಜೋರಿಯಲ್ಲಿದ್ದು ಬೆಳ್ಳಿಯ ವಸ್ತುಗಳನ್ನು ಹೊರತುಪಡಿಸಿ 651ಗ್ರಾಂ ಚಿನ್ನ ಮಾತ್ರ ಮಹಜರು ನಡೆಸುವ ವೇಳೆ ಲೆಕ್ಕಕ್ಕೆ ಲಭ್ಯವಾಗಿತ್ತು. ಅವುಗಳ ನಡುವೆ 3 ವಸ್ತುಗಳು ನಕಲಿ ಎಂಬುದು ದೃಢಪಟ್ಟಿದೆ. ರಶೀದಿಯ ಪ್ರಕಾರ ದೇವಳದ ತಿಜೋರಿಯಲ್ಲಿ 3,069ಗ್ರಾಂ ಚಿನ್ನಾಭರಣಇರಬೇಕಾಗಿದ್ದು, ಉಳಿದ2,423ಗ್ರಾಂ ಒಡವೆಗಳಿಗಾಗಿ ಹುಡುಕಾಟ ನಡೆದಿದೆ. ಈ ಮಧ್ಯೆ ಆರೋಪಿಯ ಬಳಿಯಿದ್ದ 12.45ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಒಡವೆಯಗಳಲ್ಲಿ ವಿವಿಧ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಅಡವಿಟ್ಟಿರುವ ಬಗ್ಗೆ ಆರೋಪಿ ತಿಳಿಸಿದ್ದು ಅವುಗಳಿಗೆ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಕುಂದಾಪ್ರ ಡಾಟ್ ಕಾಂ ವರದಿ
ರಶೀದಿ ಇಲ್ಲದೇ ಕಾಣೆಯಾದ ಚಿನ್ನಕ್ಕೆ ಲೆಕ್ಕವಿಲ್ಲ:
ದೇವರಿಗಾಗಿ ಭಕ್ತರು ಅರ್ಪಿಸುತ್ತಿದ್ದ ಎಲ್ಲಾ ಚಿನ್ನಾಭರಣಗಳಿಗೂ ರಶೀದಿ ನೀಡುತ್ತಿರಲಿಲ್ಲ ಎಂಬ ಆರೋಪವೂ ಶಿವರಾಮ್ ವಿರುದ್ಧ ದೇವಳದ ಕೆಲವು ಸಿಬ್ಬಂಧಿಗಳಿಂದ ಕೇಳಿಬರುತ್ತಿದೆ. ರಶೀದಿ ನೀಡಿ ತಿಜೋರಿಯಲ್ಲಿಟ್ಟಿದ್ದ ಚಿನ್ನಾಭರಣ ಯಾವುದು ಎಂಬ ಮಾಹಿತಿ ಇದ್ದರೂ, ರಶೀದಿ ನೀಡದೇ ಎಗರಾಯಿಸಿದ್ದ ಚಿನ್ನಾಭರಣ ಯಾವುದು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಇಷ್ಟು ಪ್ರಮಾಣದಲ್ಲಿ ರಾಜಾರೋಷವಾಗಿ ದೇವರಿಗೆ ಸಲ್ಲಿಸಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾದರೇ ಇದು ಒಬ್ಬ ವ್ಯಕ್ತಿಯಿಂದ ಆದ ಕೆಲಸವಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ
ಇದನ್ನೂ ಓದಿ:
► ಕೊಲ್ಲೂರು ದೇಗುಲದಲ್ಲಿ ಚಿನ್ನಾಭರಣ ಕಳವು? – http://kundapraa.com/?p=11395 .
► ದೇವಳದ ಭದ್ರತೆಯ ಬಗ್ಗೆ ಅನುಮಾನ. ಅಧಿಕಾರಿಗಳ ಬಗ್ಗೆ ಭಕ್ತರ ಆಕ್ರೋಶ – http://kundapraa.com/?p=11401 .
► ಕೊಲ್ಲೂರು ದೇವಳದ ಚಿನ್ನ ಕಳವು ಪ್ರಕರಣ. ಆಪಾದಿತ ನೌಕರ ಶಿವರಾಮ ಪತ್ತೆ – http://kundapraa.com/?p=11440 .
► ಕೊಲ್ಲೂರು ದೇವಳದ ನೌಕರನ ಕರ್ಮಕಾಂಡ ಬಯಲಿಗೆ. ಹಲವರು ಭಾಗಿಯಾಗಿರುವ ಶಂಕೆ – http://kundapraa.com/?p=11503 .