ಕೊಲ್ಲೂರು ದೇವಳದ ಚಿನ್ನ ಕಳವು ಪ್ರಕರಣ: ಒಟ್ಟು ಐವರ ಬಂಧನ. 18ಮಂದಿಯ ವಿಚಾರಣೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಕಳೆದ ಕೆಲವಾರು ದಿನಗಳಿಂದ ಭಾರಿ ಗದ್ದಲ ಎಬ್ಬಿಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸೇವಾ ಕೌಂಟರ್‌ನ ತಿಜೋರಿ ಚಿನ್ನ ಕಳವು ಪ್ರಕರಣವನ್ನು ಭೇದಿಸುವಲ್ಲಿ ಎಸ್ಪಿ ಅಣ್ಣಾಮಲೈ ನೇತೃತ್ವದ ತಂಡ ಯಶಸ್ವಿಯಾಗಿದ್ದು ಪ್ರಕರಣದ ಪ್ರಮುಖ ಆರೋಪಿ ಶಿವರಾಮ ಮಡಿವಾಳ ಸೇರಿದಂತೆ ಇತರೇ ನಾಲ್ವರನ್ನು ಬಂಧಿಸಿದ್ದು, ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣದ ಭಾಗಿಗಳಾದ ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದು ಕಳವುಗೈಯಲಾದ ದೇವಿಯ ಬಹುಪಾಲು ಚಿನ್ನವನ್ನು ಮರಳಿ ವಶಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ

Call us

Click Here

Click here

Click Here

Call us

Visit Now

Click here

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಕೊಲ್ಲೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ದೇವಳದ ಒಂದನೇ ನಂಬರಿನ ಸೇವಾ ಕೌಂಟರ್‌ನಲ್ಲಿ ಕಳೆದ ಹದಿನೈದು ವರ್ಷಗಳಿಂದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಶಿವರಾಮ ಮಡಿವಾಳ ಕಳೆದ ಫೆ.15ರಿಂದ ತಿಜೋರಿಯ ಕೀಲಿಕೈಯೊಂದಿಗೆ ನಾಪತ್ತೆಯಾಗಿರುವ ಸುದ್ದಿ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಅಲ್ಲಿಂದಲೇ ಚಿನ್ನ ಕಳವಿನ ಸಂಶಯ ಮೂಡಿತ್ತು. ವಿಷಯ ಬಹಿರಂಗಗೊಳ್ಳುತ್ತಿದ್ದಂತೆಯೇ ದೇವಳದ ಕಾರ್ಯನಿರ್ವಹಣಾಧಿಕಾರಿ ಕೊಲ್ಲೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸ್ ಇಲಾಖೆ ಶಿವರಾಮನನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿತ್ತು. ಕುಂದಾಪ್ರ ಡಾಟ್ ಕಾಂ ವರದಿ

ಶಿವರಾಮ ಮಡಿವಾಳನನ್ನು ವಿಚಾರಣೆ ಒಳಪಡಿಸುತ್ತಿದ್ದಂತೆ ಪ್ರಕರಣ ಒಂದೊಂದೇ ಮಜಲು ಬೆಳಕಿಗೆ ಬಂದಿತ್ತು. ದೇವಳದಿಂದ ಕದ್ದ ಚಿನ್ನವನ್ನು ಬೇರೆಯವರ ಹೆಸರಿನಲ್ಲಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟು ಹಣ ಪಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

413ಗ್ರಾಂ ಚಿನ್ನ ಹಿಂಪಡೆಯಲು ಬಾಕಿ:
ದೇವಳದ ಸೇವಾ ಕೌಂಟರ್‌ನ ತಿಜೋರಿಯಲ್ಲಿ ಒಟ್ಟು ರಶೀದಿ ಪಡೆದ 3,172ಗ್ರಾಂ ಇರಬೇಕಿತ್ತು. ಆದರೆ ತಿಜೋರಿಯನ್ನು ತಪಾಸಣೆಗೊಳಪಡಿಸಿದಾಗ 651ಗ್ರಾಂ ಚಿನ್ನವಷ್ಟೇ ಲಭ್ಯವಾಗಿತ್ತು. 2,521ಗ್ರಾಂ ಚಿನ್ನ ಕಳವಾಗಿತ್ತು. ಮತ್ತೆ ದೇವಳದಲ್ಲಿಯೇ ಹುಡುಕಾಡಿದಾಗ 430ಗ್ರಾಂ ಚಿನ್ನ ದೊರೆತಿತ್ತು. ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟಿದ್ದ 1.675ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, 413ಗ್ರಾಂ ಚಿನ್ನ ಇನ್ನಷ್ಟೇ ಪತ್ತೆಯಾಗಬೇಕಿದೆ. ಇದರೊಂದಿಗೆ ಪತ್ತೆಯಾಗಿರುವ 138ಗ್ರಾಂ. ಚಿನ್ನಕ್ಕೆ ರಶೀದಿ ದೊರೆತಿಲ್ಲ. ಕುಂದಾಪ್ರ ಡಾಟ್ ಕಾಂ ವರದಿ

Call us

ಮತ್ತೆ ನಾಲ್ವರ ಹೆಸರು ಬಹಿರಂಗ:
ದೇವಳದ ಸಿಬ್ಬಂದಿಗಳಾದ ಪ್ರಸಾದ್ ಆಚಾರ್ಯ, ನಾಗರಾಜ ಶೇರುಗಾರ್, ಗಂಗಾಧರ ಹೆಗ್ಡೆ, ಹೊರಗುತ್ತಿಗೆ ನೌಕರ ಗಣೇಶ್ ಪೂಜಾರಿ ಪ್ರಕರಣದಲ್ಲಿ ಭಾಗಿಯಾಗಿದ್ದು, ಇನ್ನೂ 8 ಮಂದಿ ಚಿನ್ನವನ್ನು ಅಡವಿಡಲು ಸಹಕರಿಸಿದ್ದಾರೆ ಎಂದು ತಿಳಿದು ಬಂದಿದ್ದು ಅವರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನೂ 10 ಜನರ ಬಗ್ಗೆ ಸಂಶವಿದ್ದು ಅವರನ್ನೂ ವಿಚಾರಣೆಗೊಳಪಡಿಸಲಾಗಿದೆ.

ಕದ್ದ ಹಣ ಮರುಪಾವತಿಗೆ ಚಿನ್ನ ಅಡವಿಟ್ಟರು:
2012ರಿಂದ ನಿರಂತರವಾಗಿ ಸೇವಾ ಕೌಂಟರಿನಿಂದ ಹಣ ಎಗರಾಯಿಸುತ್ತಿದ್ದ ತನಿಕೆಯ ವೇಳೆ ಬಹಿರಂಗಗೊಂಡಿದೆ. ತಮ್ಮ ವಿಲಾಸಿ ಜೀವನಕ್ಕಾಗಿ ಇದೇ ಕಸುಬನ್ನು ಮುಂದುವರಿಸಿದ್ದರು ಎಂಬುದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ದಿನಗಳೆದಂತೆ ಹಣದ ಮೊತ್ತ 11ಲಕ್ಷ ಆಗುತ್ತಿದ್ದಂತೆ ಆ ಹಣವನ್ನು ಮರುಪಾವತಿಸಲು ತಿಜೋರಿಯಲ್ಲಿದ್ದ ಚಿನ್ನಕ್ಕೆ ಕನ್ನ ಹಾಕಲು ಶುರುವಿಟ್ಟುಕೊಂಡರು. ದಿನಗಳಂತೆ ತಿಜೋರಿಯಲ್ಲಿದ್ದ ಚಿನ್ನವೆಲ್ಲ ಹಣಕಾಸು ಸಂಸ್ಥೆಗಳಲ್ಲಿ ಜಮಾವಾಗುತ್ತಿದ್ದವು. ಕೌಂಟರಿನ ಹಣ ಹಿಂದಿರುಗಿಸಲು ಅಡವಿಟ್ಟ ಚಿನ್ನದ ಹಣ ಜೂಜು, ಮಟ್ಕಾ, ಕುಡಿತ ಹಾಗೂ ಕ್ರಿಕೆಟ್ ಬೆಟ್ಟಿಂಗ್‌ಗೆ ಬಳಕೆಯಾಗುತ್ತಿದ್ದವು.

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ:
ಕಳೆದ ಎಂಟು ವರ್ಷಗಳಿಂದ ಇಂತಹ ನಾಲ್ಕು ಪ್ರಕರಣಗಳು ನಡೆದಿದ್ದರೂ ದೇವಳದ ಅಧಿಕಾರಿಗಳು ಎಚ್ಚರ ವಹಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು ಎಂಬುದು ಈ ಪ್ರಕರಣದಿಂದ ಮತ್ತೆ ಸಾಬೀತಾಗಿದೆ. ಕರ್ತವ್ಯಲೋಪ ಎಸಗುತ್ತಿದ್ದ ಸಿಬ್ಬಂದಿಗಳನ್ನು ಎಚ್ಚರಿಸುವುದನ್ನು ಬಿಟ್ಟು ಅವರಿಗೆ ಬೆಂಬಲ ನೀಡುತ್ತಿದ್ದುದು ಪ್ರಕರಣ ಈ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಈವರಗೆ ನಡೆದ ಯಾವ ಪ್ರಕರಣಗಳಿಗೂ ಪೊಲೀಸ್ ಠಾಣೆಗೆ ದೂರು ನೀಡದೇ ಒಳಗೊಳಗೆ ರಾಜಿ ಮಾಡುತ್ತಿದ್ದುದರ ಹಿಂದೆ ಅಧಿಕಾರಿಗಳ ಕೈವಾಡ ಇರುವುದನ್ನು ಅಲ್ಲಗಳೆಯುವಂತಿಲ್ಲ.

ದೇವಳದ ಎಲ್ಲಾ ವಿಭಾಗಗಳಲ್ಲಿಯೂ ತನಿಕೆ:
ತಿಜೋರಿಯ ಚಿನ್ನ ಕಳವು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇವಳದ ಇತರೇ ವಿಭಾಗಗಳಲ್ಲಿಯೂ ಅವ್ಯವಹಾರ ನಡೆದಿರುವ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಿರು ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಬಳಿಕ ಮುಂದಿನ ತನಿಕೆ ಕೈಗೆತ್ತಿಕೊಳ್ಳುವ ಬಗ್ಗೆ ಎಸ್ಪಿ ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ

ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಸುದರ್ಶನ್, ಠಾಣಾಧಿಕಾರಿ ಶೇಖರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಕುಂದಾಪ್ರ ಡಾಟ್ ಕಾಂ ವರದಿ ಸರಣಿ
►► ಲೆಕ್ಕಕ್ಕೆ ಸಿಕ್ಕಿದ್ದು 60ಲಕ್ಷಕ್ಕೂ ಅಧಿಕ ಮೌಲ್ಯ. ರಶೀದಿ ಇಲ್ಲದ್ದಕ್ಕೆ ಲೆಕ್ಕವೂ ಇಲ್ಲ! – http://kundapraa.com/?p=11511 .
►► ದೇವಳದ ಭದ್ರತೆಯ ಬಗ್ಗೆ ಅನುಮಾನ. ಅಧಿಕಾರಿಗಳ ಬಗ್ಗೆ ಭಕ್ತರ ಆಕ್ರೋಶ – http://kundapraa.com/?p=11401 .
►► ಕೊಲ್ಲೂರು ದೇವಳದ ನೌಕರನ ಕರ್ಮಕಾಂಡ ಬಯಲಿಗೆ. ಹಲವರು ಭಾಗಿಯಾಗಿರುವ ಶಂಕೆ – http://kundapraa.com/?p=11503 .
►► ಕೊಲ್ಲೂರು ದೇವಳದ ಚಿನ್ನ ಕಳವು ಪ್ರಕರಣ. ಆಪಾದಿತ ನೌಕರ ಶಿವರಾಮ ಪತ್ತೆ – http://kundapraa.com/?p=11440 .
►► ಕೊಲ್ಲೂರು ದೇಗುಲದಲ್ಲಿ ಚಿನ್ನಾಭರಣ ಕಳವು? – http://kundapraa.com/?p=11395 .

DSC01833 DSC01835 DSC01836 DSC01839

Leave a Reply

Your email address will not be published. Required fields are marked *

3 − 3 =