ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕೊಲ್ಲೂರು ಹಾಗೂ ಆರಕ್ಷಕ ಠಾಣೆ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಚರಣೆ ೨೦೨೧ರ ಪ್ರಯುಕ್ತ ವಿದ್ಯಾರ್ಥಿಗಳಿಗೆ ಅಪರಾಧ ತಡೆಯ ಬಗ್ಗೆ ಕೊಲ್ಲೂರಿನ ಠಾಣಾಧಿಕಾರಿ ನಾಸಿರ್ ಹುಸೇನ್‌ರವರು ಮಾಹಿತಿ ನೀಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಎಸ್ ಅರುಣ್‌ಪ್ರಕಾಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಗೋಪಾಲಕೃಷ್ಣ ಜಿ.ಬಿ, ಪೂರ್ಣಿಮಾ ಎನ್ ಜೋಯಿಸ್, ಸುಕೇಶ್ ಶೆಟ್ಟಿ ಹೊಸಮಠ, ರಾಮನಾಯ್ಕ ಕೆ.ಬಿ, ಪ್ರ.ದ.ಸಹಾಯಕರಾದ ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ನಾಗರಾಜ ಅಡಿಗ ಕೆ. ಕಾರ್ಯಕ್ರಮ ನಿರ್ವಹಿಸಿದರು.