ಕೊಲ್ಲೂರು: ನಿಫಾ ವೈರಸ್ ಕುರಿತು ಮುಂಜಾಗ್ರತಾ ಸಭೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಕೊಲ್ಲೂರು ದೇವಳದ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ನಿಫಾ ವೈರಸ್ ಸೋಂಕು ಕುರಿತು ಮುಂಜಾಗ್ರತಾ ಸಭೆ ನಡೆಸಲಾಯಿತು.

Call us

Call us

Visit Now

ಈ ತರ್ತುಸಭೆಯಲ್ಲಿ ಕೊಲ್ಲೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೆನಿಟಾ ಫೆರ್ನಾಂಡೀಸ್ ಅವರು ನೆರೆಯ ಕೇರಳದಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ನಿಫಾ ವೈರಸ್ ಸೋಂಕು ಪ್ರಕರಣ ಕೊಲ್ಲೂರು ಭಾಗಗಳಲ್ಲಿ ಈವರೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹಾಗೂ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Click here

Call us

Call us

ಕ್ಷೇತ್ರಕ್ಕಾಗಮಿಸುವ ಭಕ್ತರ ಮತ್ತು ವಸತಿಗೃಹಗಳಲ್ಲಿ ಉಳಿದುಕೊಳ್ಳುವವರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ದೇವಳದ ಆಡಳಿತ ಮಂಡಳಿ, ವ್ಯವಸ್ಥಾಪನಾ ಸಮಿತಿ ಮತ್ತು ಗ್ರಾಮ ಪಂಚಾಯತ್ ಜತೆಗೂಡಿ ಮುನ್ನೆಚ್ಚಿರಿಕಾ ಕ್ರಮಕೈಗೊಳ್ಳಲಾಗಿದೆ. ಯಾತ್ರಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಅಂತವರ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರಥಮ ತುರ್ತು ಚಿಕಿತ್ಸಾ ವಿಭಾಗ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸಲಿದೆ. ಸಿಬ್ಬಂದಿಗಳ ಕೊರತೆಯಿದ್ದರೂ ಇರುವ ಸಿಬ್ಬಂದಿಗಳು ಪ್ರತಿ ಮನೆಮನೆಗೂ ತೆರಳಿ ರೋಗದ ಲಕ್ಷಣಗಳು, ಬರದಂತೆ ತಡೆಯುವ ಕುರಿತು ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದ ಅವರು ಸಾರ್ವಜನಿಕರು ಸಾಧ್ಯವಾದಷ್ಟರ ಮಟ್ಟಿಗೆ ತಮ್ಮ ತಮ್ಮ ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅವಶ್ಯಕ ಎಂದು ಮನವಿ ಮಾಡಿದರು.

ಪ್ರಮುಖವಾಗಿ ಕೇರಳ ರಾಜ್ಯದಿಂದ ಕೊಲ್ಲೂರಿಗೆ ಬರುವ ಭಕ್ತರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಕೇರಳದಲ್ಲಿ ಅತೀ ಹೆಚ್ಚು ನಿಫಾ ಸೋಂಕಿತ ಮುಖ್ಯವಾಗಿ ನಾಲ್ಕು ಊರುಗಳಲ್ಲಿ ಜನರಿಗೆ ಎಲ್ಲಿಯೂ ಸಂಚಾರ ಮಾಡದಂತೆ ನಿರ್ಬಂಧಿಸಲಾಗಿದೆ. ಆ ಭಾಗದ ಬಾವಲಿಗಳು ವಲಸೆ ಬಾರದಿದ್ದರೂ ರೋಗ ಸೋಂಕಿತ ವ್ಯಕ್ತಿಯಿಂದ ಈ ರೋಗ ಹರಡುತ್ತದೆ. ಅಲ್ಲದೇ ಹಕ್ಕಿಗಳು ಕಚ್ಚಿದ ಹಣ್ಣುಗಳನ್ನು ಸಹ ತಿನ್ನಬಾರದು. ಅಲ್ಲದೇ ಹೆಚ್ಚು ಮಳೆ ಬರುವ ಪ್ರದೇಶಗಳಲ್ಲಿ ಈ ರೋಗ ನಿಯಂತ್ರಣಕ್ಕೆ ಬರುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೊಲ್ಲೂರು ರಮೇಶ ಗಾಣಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ ಇದ್ದರು.

 

Leave a Reply

Your email address will not be published. Required fields are marked *

13 − 5 =