ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಖಾರ್ವಿ (೪೩) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ರಾತ್ರಿ ಊಟ ಮುಗಿಸಿ ಮಲಗಿದ ಬಳಿಕ ಎದೆನೋವು ಕಾಣಿಸಿಕೊಂಡಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ರಾತ್ರಿ ಎರಡು ಗಂಟೆ ಸುಮಾರು ಮೃತಪಟ್ಟಿದ್ದಾರೆ. ಗಂಗೊಳ್ಳಿಯ ಕಾರಂತಬೈಲು ನಿವಾಸಿಯಾದ ಅಶೋಕ್, ಕಳೆದ ನಾಲ್ಕು ತಿಂಗಳಿನಿಂದ ಕುಂದಾಪುರದ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದರು. ಕೋಟ, ಕೊಲ್ಲೂರು ಠಾಣೆಗಳಲ್ಲಿ ಸೇವೆಸಲ್ಲಿಸಿ, ಇಲಾಖೆಯಲ್ಲಿ ಉತ್ತಮ ಹೆಸರು ಮಾಡಿದ್ದರು. ಮೃತರು ಪತ್ನಿ ಸುಮಿತ್ರಾ ಮಕ್ಕಳಾದ ಆದಿತ್ಯಾ ಹಾಗೂ ಅಪೇಕ್ಷಾ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
ಸಕಲ ಸರಕಾರಿ ಗೌರವದೊಂದಿಗೆ ವಿದಾಯ:
ಮೃತ ಪೊಲೀಸ್ ಅಶೋಕ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಕುಂದಾಪುರ ಡಿವೈಎಸ್ಪಿ ಪ್ರವೀಣನಾಯಕ್, ಬೈಂದೂರು ವೃತ್ತನಿರೀಕ್ಷಕ ರಾಘವ ಪಡೀಲ್, ಕುಂದಾಪುರ ಎಸೈ ನಾಸಿರ್ ಹುಸೇನ್, ಕೊಲ್ಲೂರು ಎಸೈ ಶೇಖರ ಸೇರಿದಂತೆ ತಾಲೂಕಿನ ವಿವಿಧ ಠಾಣೆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಅಂತಿಮ ನಮನ ಸಲ್ಲಿಸಿದರು.