ಕೊಲ್ಲೂರು ವಲಯ ಜಿಎಸ್‌ಬಿ ಸೇವಾ ಸಮಿತಿ ವಾರ್ಷಿಕೋತ್ಸವ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ಜಿಎಸ್‌ಬಿ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದ ವೇ.ಮೂ. ವೇದವ್ಯಾಸ ಆಚಾರ್ಯ ಹೇಳಿದರು.

Click Here

Call us

Call us

Visit Now

ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ನಡೆದ ಕೊಲ್ಲೂರು ವಲಯ ಜಿಎಸ್‌ಬಿ ಸೇವಾ ಸಮಿತಿಯ ಮೂರನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು. ಮಕ್ಕಳಿಗೆ ದೇವರು, ಧರ್ಮ, ಗುರು-ಹಿರಿಯರ ಬಗ್ಗೆ ಮನವರಿಕೆ ಮಾಡಬೇಕೆಂದ ಅವರು ನಮ್ಮ ಮಕ್ಕಳು ಶಾಲೆಯ ಶಿಕ್ಷಣದ ಜತೆಗೆ ಆಧ್ಯಾತ್ಮಿಕ, ನೈತಿಕ ಹಾಗೂ ಭೌತಿಕ ಶಿಕ್ಷಣವನ್ನು ಪಡೆಯಬೇಕು. ಸಂಜೆ ಧಾರಾವಾಹಿಗಳನ್ನು ನೋಡುವುದರ ಬದಲು ನಮ್ಮ ಹಿರಿಯರು ನಡೆಸಿಕೊಂಡು ಬಂದಂತೆ ಪ್ರತೀ ಮನೆಗಳಲ್ಲಿಯೂ ಸಂಧ್ಯಾಕಾಲದ ಭಜನೆ ಮಾಡಬೇಕು. ಮಕ್ಕಳಿಗೆ ಟೀವಿ, ಮೊಬೈಲ್ ಸಹವಾಸದಿಂದ ದೂರವಿಟ್ಟು ವ್ಯವಹಾರಿಕಾ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಕುರಿತಾದ ಅರಿವು ಮೂಡಿಸಬೇಕು ಎಂದರು.

Click here

Click Here

Call us

Call us

ಕೊಲ್ಲೂರು ಜಿಎಸ್‌ಬಿ ವಲಯಾಧ್ಯಕ್ಷ ಜಿ. ವೆಂಕಟೇಶ್ ನಾಯಕ್ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಧಕರನ್ನು ಗೌರವಿಸಲಾಯಿತು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಯು. ವಿಷ್ಣು ಪಡಿಯಾರ್, ಕಾರ್ಯದರ್ಶಿ ಯು. ಸತೀಶ್ ಪಡಿಯಾರ್, ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ್ ಹೆಗ್ಡೆ ಕೋಟ, ನಿವೃತ್ತ ಮುಖ್ಯಶಿಕ್ಷಕ ಗುಜ್ಜಾಡಿ ಸುರೇಶ ಕಾಮತ್, ಸಿಂಡಿಕೆಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ರಾಮದಾಸ್ ಬಾಳಿಗ, ಉದ್ಯಮಿ ಬಿ. ವಿಶ್ವನಾಥ ಪಡಿಯಾರ್, ಸಮಿತಿಯ ಗೌರವಾಧ್ಯಕ್ಷ ಬಿ. ವಾಸುದೇವ ಭಟ್ ಹಾಗೂ ವಿಶೇಷ ಅತಿಥಿಗಳಾಗಿ ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ, ಜಿಪಂ ಸದಸ್ಯರಾದ ಶಂಕರ ಪೂಜಾರಿ, ಕೆ. ಬಾಬು ಶೆಟ್ಟಿ ಉಪಸ್ಥಿತರಿದ್ದರು. ಯಳಜಿತ್ ಮಂಗೇಶ ಶ್ಯಾನುಭಾಗ್ ಸ್ವಾಗತಿಸಿ, ಕಾರ್ಯದರ್ಶಿ ಜಡ್ಕಲ್ ಅಶೋಕ ಶ್ಯಾನುಭಾಗ್ ವಂದಿಸಿದರು. ಎಲ್ಲೂರು ರಾಜೇಶ್ ಕಿಣಿ ನಿರೂಪಿಸಿದರು.
ಬೆಳಿಗ್ಗೆ ಗಣಹವನ, ಶ್ರೀ ಸತ್ಯನಾರಾಯಣ ಪೂಜೆ, ನಂತರ ಭಟ್ಕಳ ಉದಯ ಪ್ರಭು ಮತ್ತು ಬಳಗದವರಿಂದ ಭಕ್ತಿ ಸಂಗೀತ ನಡೆಯಿತು.

Leave a Reply

Your email address will not be published. Required fields are marked *

one × 5 =