ಕೊಲ್ಲೂರು ಶರವನ್ನವರಾತ್ರಿ ಉತ್ಸವ: ಕೇರಳದ ಚಂಡೆವಾದನ ಹಾಗೂ ಪಂಚವಾದ್ಯ ತಂಡದಿಂದ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶರನ್ನವರಾತ್ರಿ ಪ್ರಯುಕ್ತ ಶ್ರೀ ಮೂಕಾಂಬಿಕಾ ದೇವಳದ ಸ್ವರ್ಣಮುಖಿ ರಂಗಮಂದಿರದಲ್ಲಿ ಕೇರಳದ ಪ್ರಸಿದ್ದ ಚಂಡೆವಾದನ ಹಾಗೂ ಪಂಚವಾದ್ಯ ತಂಡದವರಿಂದ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಜನಾರ್ದನ್ ಜಿ. ಸಿ. ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭ ಎಇಒ ಎಚ್. ಕೃಷ್ಣಮೂರ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಂಜುನಾಥ ಅಡಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ಕೆ. ರಮೇಶ ಗಾಣಿಗ, ಅಭಿಲಾಷ್ ಪಿ. ವಿ., ಯು. ರಾಜೇಶ್ ಕಾರಂತ್, ನರಸಿಂಹ ಹಳಗೇರಿ, ಜಯಂತಿ ವಿಜಯಕೃಷ್ಣ ಪೊಡುಕೋಣೆ, ಅಂಬಿಕಾ ಆರ್. ದೇವಾಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

5 × 1 =