ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ನವಶಕ್ತಿ ಮಹಿಳಾ ವೇದಿಕೆ ಕೊಲ್ಲೂರು ವತಿಯಿಂದ ೨೦೧೯- ೨೦ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ವಂದನಾ ಆರ್ ಹೆಗಡೆ ೬೦೫, ರಶ್ಮಿತಾ ಎನ್ ೬೦೪ ಮತ್ತು ಪೃಥ್ವಿನ್ ೬೦೩ ಅಂಕಗಳೊಂದಿಗೆ ಶಾಲೆಗೆ ಟಾಪರ್ ಆಗಿದ್ದು ಅವರನ್ನು ಸನ್ಮಾನಿಸಲಾಯಿತು.
ಪೃಥ್ವಿನ್ ಅವರ ಪರವಾಗಿ ಅವರ ತಾಯಿ ಮಮತಾ ಅವರು ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಗ್ರೀಷ್ಮಾ ಗಿರಿಧರ ಭಿಡೆ, ನವಶಕ್ತಿ ಮಹಿಳಾ ವೇದಿಕೆಯ ಸದಸ್ಯರಾದ ಶಾರದಾ ಸುಷ್ಮಾ ಸುಗುಣ ಜಯಲಕ್ಷ್ಮಿ ಸೀತಾ ಜ್ಯೋತಿ ರಾಘವೇಂದ್ರ ಜಯಲಕ್ಷ್ಮಿ ಉಪಸ್ಥಿತರಿದ್ದರು.