ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಆರ್ಥಿಕ ಅವ್ಯವಹಾರದ ಆರೋಪ: ಗುರುಪ್ರಸಾದ್ ಗೌಡ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಲೆಕ್ಕಾಪರಿಶೋಧನೆ ಸರಿಯಾಗಿಲ್ಲ. ಮುಜರಾಯಿ ಇಲಾಖೆಯಡಿ ಬಡುವ ದೇವಾಯಲಗಳ ಆರ್ಥಿಕ ಸ್ಥಿತಿ ಒಂದೇ ಸಾಲಿನಲ್ಲಿದೆ. ಮಹಾಸಂಗವು ಇತರ ಮುಜರಾಯಿ ದೇವಾಲಯದ ಆರ್ಥಿಕ ಅವ್ಯವಹಾರವನ್ನು ಒಂದೊಂದಾಗಿ ಬಹಿರಂಗಪಡಿಸುತ್ತದೆ. ಕೊಲ್ಲೂರು ಕರ್ನಾಟಕದ ಎರಡನೇ ಅತಿ ದೊಡ್ಡ ಆದಾಯ ಗಳಿಸುವ ದೇವಾಲಯವಾಗಿದೆ ಎಂದು ಮಹಾಸಂಘದ ವಕ್ತಾರ ಗುರುಪ್ರಸಾದ್ ಗೌಡ ಆರೋಪ ಮಾಡಿದ್ದಾರೆ.

Click Here

Call us

Call us

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕೊಲ್ಲೂರು ದೇವಾಲಯದಲ್ಲಿ ಆರ್ಥಿಕ ಅವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು.

Click here

Click Here

Call us

Visit Now

2018-19ನೇ ಸಾಲಿನಲ್ಲಿ ಜಿಲ್ಲಾ ಆಯುಕ್ತರ ಮನೆಯ 23,363 ರೂ. ದೂರವಾಣಿ ಬಿಲ್ ಅನ್ನು ದೇವಾಲಯ ಸಮಿತಿಯೇ ಪಾವತಿಸಿದೆ. ಕೆಲವು ಸರ್ಕಾರಿ ನೌಕರರ ವೇತನವನ್ನು ದೇವಾಲಯದಿಂದಲೂ ನೀಡಲಾಗುತ್ತದೆ. ದೇವಾಲಯದ ಲೆಕ್ಕಪರಿಶೋಧನೆ ಸರಿಯಿಲ್ಲ. 20 ಕೋಟಿಗೂ ಅಧಿಕ ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈಗ ಮಹಾಸಂಘವು ಪೊಲೀಸ್ ಇಲಾಖೆಯಿಂದ ನ್ಯಾಯಯುತ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದೆ. ”ಹಣಕಾಸಿನ ದುರುಪಯೋಗವು 2016 ರಲ್ಲಿ ಬೆಳಕಿಗೆ ಬಂದಿದೆ. ಆದರೆ ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಭಕ್ತರು ದೇವರಿಗೆಂದು ಆಭರಣವನ್ನು ಕಾಣಿಕೆ ನೀಡುತ್ತಾರೆ. ಆದರೆ ಅದನ್ನು ದೇವಾಲಯದ ಸಿಬ್ಬಂದಿ ನುಂಗಿ ಹಾಕಿದ್ದಾರೆ. ಅದರ ಲೆಕ್ಕವನ್ನೂ ತೋರಿಸಿಲ್ಲ. ಅಕ್ರಮ ನಡೆಸಿದ ಅಪರಾಧಿಗಳಿಗೆ ಶಿಕ್ಷೆ ಆಗಬೇಕು” ಎಂದು ಒತ್ತಾಯಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ. ಈ ವಂಚನೆಯಲ್ಲಿ ಹೆಚ್ಚಿನ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸರ್ಕಾರದ ಸೂಚನೆ ಇಲ್ಲದೆ ಕೋಟಿಗಟ್ಟಲೆ ಹಣವನ್ನು ದುರುಪಯೋಗಪಡಿಸಲಾಗಿದೆ. ದೇವಾಲಯದ ಭೂಮಿಯನ್ನು ಬೇರೊಬ್ಬರು ಸ್ವಾಧೀನಪಡಿಸಿಕೊಂಡಿದ್ದಾರೆ. ಮುಜರಾಯಿ ಇಲಾಖೆಯ ಅಡಿಯಲ್ಲಿ ಈ ದೇವಾಲಯ ಬರುವುದಾದರೂ ಸರಿಯಾದ ವೆಚ್ಚದ ವಿವರ ನೀಡುತ್ತಿಲ್ಲ ಎಂದು ದೂರಿದರು.

Call us

ಈ ಪ್ರಕರಣದ ಬಗ್ಗೆ ಸರ್ಕಾರ ತನಿಖೆ ನಡೆಸಿ ಕೊಲ್ಲೂರಿನಲ್ಲಿ ಎಲ್ಲ ಅಕ್ರಮ ವ್ಯವಹಾರ ಮತ್ತು ವಂಚನೆ ಚಟುವಟಿಕೆಗಳನ್ನು ಬಹಿರಂಗಪಡಿಸಲಿ. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

five × 3 =