ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಸರಣಿ ಕಾರ್ಯಕ್ರಮ ಸ್ವಚ್ಛತಾ ಆಂದೋಲನದ 17ನೇ ದಿನ ಸ್ಥಳೀಯ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರ ಮತ್ತು ಗ್ರಾಮಸ್ಥರು ಏಕಕಾಲದಲ್ಲಿ ಸೌಪರ್ಣಿಕಾ ನದಿತೀರ, ಸಲಗೇರಿ, ದಳಿ ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
18ನೇ ದಿನದ ಸ್ವಚ್ಛತಾ ಆಂದೋಲನ ಇಲ್ಲಿನ ಮಾರಿಕಟ್ಟೆ, ಶ್ರೀ ಮೂಕಾಂಬಿಕಾ ಪ್ರೌಢಶಾಲಾ ಆವರಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪರಿಸರ ಸ್ವಚ್ಛಗೊಳಿಸಲಾಯಿತು.
ಒಂದು ಹಂತದ ಸರಣಿ ಸ್ವಚ್ಛತಾ ಅಭಿಯಾನ ಮುಗಿದಿದ್ದು, ಮುಂದಿನ ದಿನಗಳಲ್ಲಿ ಪ್ರತೀ ಮಾತ್ರ ವಿವಿದೆಡೆ ಸ್ವಚ್ಛತಾ ಆಂದೋಲನ ಮುಂದುವರಿಯಲಿದೆ ಎಂದು ಅಭಿವೃದ್ಧಿ ಸಮಿತಿಯ ಡಾ. ಶ್ರೀಕಾಂತ್ ತಿಳಿಸಿದರು. ಅಲ್ಲದೇ ಗ್ರಾಮದ ಪ್ರತಿಯೊಬ್ಬರೂ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡು ಕಸಮುಕ್ತ ಕೊಲ್ಲೂರು ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.