ಕೋಟೇಶ್ವರದಲ್ಲಿ ಮೊಬೈಲ್ ಅಂಗಡಿ ಕಳವು

Call us

ಕುಂದಾಪುರ: ಬುಧವಾರ ರಾತ್ರಿ ಕೋಟೇಶ್ವರದ ಸನ್ನಿಧಿ ಮೊಬೈಲ್ ಅಂಗಡಿ ಎರಡನೆ ಬಾರಿಗೆ ಕಳವು ಪ್ರಕರಣ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

Call us

Call us

ಕೆಳವು ತಿಂಗಳ ಹಿಂದೆ ಕೋಟೇಶ್ವರ ಬೈಪಾಸ್ ಸಮೀಪದ ಸುರರ್ಶ ಎಂಬುವರ ಮಾಲಕತ್ವದ ಸನ್ನಿಧಿ ಅಂಗಡಿಯಲ್ಲಿ ಕಳವು ನಡೆದಿತ್ತು. ಬುಧವಾರ ತಡರಾತ್ರಿ ಮತ್ತೆ ಕಳವು ನಡೆದಿದ್ದು, ಅಂಗಡಿಯ ಸೆಟ್ಟರ್ ಬೀಗ ಮುರಿದು ಹೊರಗಡೆಯ ಗಾಜನ್ನು ಒಡೆದು ಒಳನುಗ್ಗಿದ ಕಳ್ಳರು ಅಂಗಡಿಯೊಳಗಿಡಲಾಗಿದ್ದ ಕಾಣಿಕೆ ಡಬ್ಬಿಯನ್ನು ದೋಚಿದ್ದಾರೆ. ಅಂಗಡಿಯಲ್ಲಿದ್ದ ದುರಸ್ತಿಗಾಗಿ ಬಂದಿದ್ದ ಹಳೆ ಏಳೆಂಟು ಮೊಬೈಲ್‌ಗಳನ್ನು ಹಾಗೂ ಮೂರ‍್ನಾಲ್ಕು ಹೊಸ ಮೊಬೈಲ್ ಫೋನ್‌ಗಳನ್ನು ಮತ್ತು ಸುಮಾರು ಮುರು ಸಾವಿರ ನಗದು ಹಣವನ್ನು ದೋಚಿದ್ದಾರೆ. ಪಕ್ಕದಲ್ಲಿಯೇ ಇದ್ದ ದಿನೇಶ್ ಎಂಬುವರ ಮಾಲಕತ್ವದ ಯೂ ಲೈಕ್ ಫ್ಯಾಷನ್ ಎನ್ನುವ ಹೆಸರಿನ ಬಟ್ಟೆ ಮತ್ತು ಟೈಲರ್ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಐದು ಸಾವಿರ ನಗದು ಮತ್ತು ಟಿವಿಯನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಕಳವಾದ ಸೊತ್ತುಗಳ ನಿಖರ ವಿವರಗಳು ಇನ್ನಷ್ಟೇ ತಿಳಿಯಬೇಕಿದ್ದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬಂದು ಸ್ಳ ಪರಿಶೀಲನೆ ನಡೆಸಿದೆ.

Call us

Call us

?
?
?
?
?
?
?
?
?
?

Leave a Reply

Your email address will not be published. Required fields are marked *

twenty − 20 =