ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ,ಮೇ15: ತಾಲೂಕಿನ ಪ್ರಸಿದ್ಧ ಪ್ರಸಿದ್ಧ ಕೈಗಾರಿಕೋದ್ಯಮಿ ಕೋಟೇಶ್ವರ ಚಂದ್ರಶೇಖರ ಶೆಟ್ಟಿ (70) ಭಾನುವಾರ ಸ್ವಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಹೆಂಚು ಮತ್ತು ಗೇರು ಬೇಜ ಕಾರ್ಖಾನೆ, ಆರ್ಥಿಕ ಸಂಸ್ಥೆ ಸ್ಥಾಪಿಸುವ ಮೂಲಕ ಕುಂದಾಪುರದಲ್ಲಿ ಕೈಗಾರಿಕೋದ್ಯಮಿಯಾಗಿ ಗುರುತಿಸಿಕೊಂಡಿದ್ದ ಅವರು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯುಲ್ಲಿ ತಮ್ಮ ವ್ಯವಹಾರ ಹೊಂದಿದ್ದರು. ಚಂದ್ರಶೇಖರ ಶೆಟ್ಟಿ ಅವರು ಕಾಲೇಜು ದಿನಗಳಲ್ಲಿ ಯುನಿವರ್ಸಿಟಿ ಶೆಟಲ್ ಬ್ಯಾಡ್ಮಿಂಟನ್ ಆಟಗಾರರಾಗಿ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರು. ಮೃತರು ಪತ್ನಿ ಇಬ್ಬರು ಗಂಡು ಮಕ್ಕಳ ಅಗಲಿದ್ದಾರೆ.
ಕೋಟೇಶ್ವರದ ಕೈಗಾರಿಕೋದ್ಯಮಿ ಚಂದ್ರಶೇಖರ ಶೆಟ್ಟಿ ನಿಧನ
