ಕೋಟೇಶ್ವರ: ಕಾರ್ಖಾನೆಗೆ ಬೆಂಕಿ. ಲಕ್ಷಾಂತರ ರೂ. ನಷ್ಟ

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ,ಫೆ.24: ಇಲ್ಲಿನ ಕೋಟೇಶ್ವರ ಕೈಗಾರಿಕಾ ವಲಯದಲ್ಲಿರುವ ದಾಮೋದರ ಕೆಮಿಕಲ್ ಇಂಡಸ್ಟ್ರಿಗೆ ಬೆಂಕಿ ತಗುಲಿ ಇಡಿ ಕಾರ್ಖಾನೆಯ ಭಸ್ಮಗೊಂಡ ಘಟನೆ ಇಂದು ಬೆಳಿಗ್ಗೆ 11:30ರ ಸುಮಾರಿಗೆ ನಡೆದಿದೆ.  ಕುಂದಾಪ್ರ ಡಾಟ್ ಕಾಂ ವರದಿ 

Call us

Call us

Visit Now

ಘಟನೆಯ ವಿವರ:
ವಾಹನದ ಬ್ರೇಕ್ ಲೈನರ್‌ಗೆ ಬಳಸುವ ಆಯಿಲ್ ತಯಾರಿಸುವ ಕಾರ್ಖಾನೆಯ ಗೋಡನ್‌ನಲ್ಲಿ ಸುಮಾರು ೪೦ ಟನ್ ಆಯಿಲ್ ಶೇಖರಿಸಿಡಲಾಗಿತ್ತು. ಒಂದೇ ಸಮನೆ ಏರಿದ ಉಷ್ಟಾಂಶದಿಂದಾಗಿ ಆಯಿಲ್ ಟ್ಯಾಂಕಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಗೆ ಆವರಿಸಿಕೊಂಡಿತ್ತು ಎನ್ನಲಾಗಿದೆ. ಏಕಾಏಕಿ ಬೆಂಕಿಯ ಧಗೆಯನ್ನು ಗಮನಿಸಿ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂಧಿಗಳಿಗೆ ಸುದ್ದಿ ಮುಟ್ಟಿಸಲಾಯಿತು. ಘಟನೆಯಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು. ದಾಮೋದರ ಕೆಮಿಕಲ್ ಇಂಡಸ್ಟ್ರೀಸ್ ಯಘ್ನೇಶ್ ಭಟ್ ಅವರ ಒಡೆತನಕ್ಕೆ ಸೇರಿದ್ದಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.  ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

Click here

Call us

Call us

Fire in Koteshwara . Damodara Chemical industries (6) Fire in Koteshwara . Damodara Chemical industries (5) Fire in Koteshwara . Damodara Chemical industries (4)

Fire in Koteshwara . Damodara Chemical industries (3) Fire in Koteshwara . Damodara Chemical industries (2) Fire in Koteshwara . Damodara Chemical industries (1)

Leave a Reply

Your email address will not be published. Required fields are marked *

five × five =