ಕೋಟೇಶ್ವರ: ಕೊಡಿಹಬ್ಬಕ್ಕೆ ತೆರಳುವವರ ವಾಹನ ಪಾರ್ಕಿಂಗ್ ಸ್ಥಳ ನಿಗದಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ದಾನದ 2021ನೇ ಸಾಲಿನ ವಾರ್ಷಿಕ ರಥೋತ್ಸವ ಕಾರ್ಯಕ್ರಮವು ನ. 18 ರಿಂದ 20ರ ತನಕ ನಡೆಯಲಿದ್ದು ಸಂಚಾರ ನಿಯಂತ್ರಣದ ದೃಷ್ಠಿಯಿಂದ ಪೊಲೀಸ್ ಇಲಾಖೆ ಭಕ್ತಾದಿಗಳ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ವಿವಿಧ ಸ್ಥಳಗಳನ್ನು ಗುರುತಿಸಲಾಗಿದೆ.

Call us

Call us

ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಗುರುತಿಸಿದ ವಿವಿಧ ಸ್ಥಳಗಳ ವಿವರ:

Call us

Call us

  • ಗೋಪಾಡಿ, ಬೀಜಾಡಿಯಿಂದ ಬರುವ ವಾಹನಗಳಿಗೆ ಪ್ರಾಥಮಿಕ ಶಾಲಾ ಕ್ರಾಸ್ ಕೋಟೇಶ್ವರ
  • ಕಾಳಾವರ, ಹಾಲಾಡಿ ಕಡೆಯಿಂದ ಬರುವ ವಾಹನಗಳಿಗೆ – ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕೋಟೇಶ್ವರ ( ದಿನೇಶ ಕಾಮತ್ ರವರ ಮನೆ ಬಳಿ) ಮತ್ತು ಶಂಕರ ಕಾಮತ್ ರವರ ಮನೆ ಬಳಿ ಕೋಟೇಶ್ವರ
  • ಕುಂದಾಪುರ ಕಡೆಯಿಂದ ಬರುವ ವಾಹನಗಳಿಗೆ – ಗುರುಪ್ರಸಾದ ಹೋಟೇಲ್ ಬಳಿ ಕೋಟೇಶ್ವರ, ಆರ್ಯ ಹೋಟೇಲ್ ಬಳಿ ಕೋಟೇಶ್ವರ ಮತ್ತು ಸಹನಾ ಹೋಟೇಲ್ ಪಾರ್ಕಿಂಗ್ ಅಂಕದಕಟ್ಟೆ ಕೋಟೇಶ್ವರ.
  • ಕುಂಭಾಶಿ, ತೆಕ್ಕಟೆ, ಉಡುಪಿಯಿಂದ ಬರುವ ವಾಹನಗಳಿಗೆ ಹೈಸ್ಕೂಲ್ ಬಳಿ ಕೋಟೇಶ್ವರ, ಕೋಸ್ಟಲ್ ಕ್ರೋನ್ ಕಾಂಪ್ಲೇಕ್ಸ್ ಬಳಿ ಕೋಟೇಶ್ವರ, ಜ್ಯೂನಿಯರ್ ಕಾಲೇಜು ಹಿಂಭಾಗ ಕೋಟೇಶ್ವರ ಮತ್ತು ಮಹಾಲಕ್ಷ್ಮೀ ಶೋ ರೂಮ್ ಬಳಿ ಕೋಟೇಶ್ವರ
  • ಗೋಪಾಡಿ, ಬೀಜಾಡಿಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಕೊಟೇಶ್ವರ ನೀರಿನ ಟ್ಯಾಂಕ್ ಬಳಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

one × four =