ಕೋಟೇಶ್ವರ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ರಜತ ರಥ ಸಾಗಾಟ

Call us

ಕುಂದಾಪುರ: ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕಾಗಿ ನಿರ್ಮಿಸಿದ ನೂತನ ರಜತ ರಥವನ್ನು ಕೋಟೇಶ್ವರದಿಂದ ಭವ್ಯ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಯಿತು. ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಪರವಾಗಿ ಆಡಳಿತ ಮೋಕ್ತೇಸರರಾದ ಶ್ರೀಧರ ಕಾಮತ್ ಮೂಲ್ಕಿಯ ಸಮಾಜ ಭಾಂಧವರನ್ನು ಸ್ವಾಗತಿಸಿಕೊಂಡರು. ದೇವಸ್ಥಾನದ ವತಿಯಿಂದ ದೇವರ ಪ್ರಾರ್ಥನೆ, ರಥಕ್ಕೆ ಆರತಿ ನಡೆಯಿತು. ಜೊತೆ ಮೋಕ್ತೇಸರರಾದ ಶಾಂತಾರಾಮ ಪೈ ಮತ್ತು ವಿಠ್ಠಲದಾಸ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Call us

ರಜತ ರಥವು ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ನಿರ್ಮಾಣಗೊಂಡಿದ್ದು, ಫೆ.10ರಂದು ಕಾಶೀ ಮಠದ ಪೀಠಾಧಿಪತಿ ಶ್ರೀಮದ್ ಸಂಯಮೀಂದ್ರ ಸ್ವಾಮೀಜಿಯವರು ಶ್ರೀ ದೇವರಿಗೆ ಸಮರ್ಪಣೆಗೊಳಿಸಲಿದ್ದಾರೆ.

news Mulki venkataramana temple ratha2

Leave a Reply

Your email address will not be published. Required fields are marked *

3 × four =