ಕೋಟೇಶ್ವರ: ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಕಾಶೀಮಠದ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಜರಗಿತು. ಮಧ್ಯಾಹ್ನ ವಿಶೇಷ ಪೂಜೆ, ಮಹಾಸಂತರ್ಪಣೆ ನಡೆಯಿತು. ಸಂಜೆ ಬೆಳ್ಳಿ ಪಲ್ಲಕ್ಕಿ ಉತ್ಸವ, ಅಷ್ಠಾವಧಾನ ಸೇವೆ, ವಸಂತ ಪೂಜೆ ನಡೆಯಿತು. ರಾತ್ರಿ ನಡೆದ ಗುಣಗಾನದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಕಾಮತ್ ಮಾತನಾಡುತ್ತಾ ಸ್ವಾಮೀಜಿಯವರು ಆಯುರ್ವೇದದಲ್ಲಿ ಆಳವಾಗಿ ಅಧ್ಯಯನ ಮಾಡಿದ್ದಾಗಿ ಮತ್ತು ಸ್ವತ: ಔಷದಿಗಳನ್ನು ತಯಾರಿಸಿ ಸಮಾಜದ ಎಲ್ಲಾ ವರ್ಗದ ಜನರ ಖಾಯಿಲೆಗಳನ್ನು ಗುಣಪಡಿಸಿದ್ದರು ಎಂದು ದೃಷ್ಟಾಂತದ ಮೂಲಕ ಹೇಳಿದರು. ಧಾರ್ಮಿಕ ವಿಧಿ ವಿಧಾನಗಳು ಶ್ರೀನಿವಾಸ್ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಭಾಗವಹಿಸಿ ಶ್ರೀ ಹರಿಗುರು ಕೃಪೆಗೆ ಪಾತ್ರರಾದರು.

Call us

Call us

Leave a Reply

Your email address will not be published. Required fields are marked *

nineteen − eight =