ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ‍್ಯಕ್ರಮ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಗವನ್ನು ಪರಿಹಾರ ಮಾಡುವ ದೇವರು ಕೋಟಿಲಿಂಗೇಶ್ವರ. ಈ ಕಾರಣದಿಂದಲೇ 2 ವರ್ಷಗಳ ಹಿಂದೆ ನಡೆಯಬೇಕಾಗಿದ್ದ ಬ್ರಹ್ಮಕಲಶೋತ್ಸವ ಕಾರ‍್ಯಗಳನ್ನು ಆ ಭಗವಂತನೇ ಬದಿಗಿಟ್ಟು ಇದೀಗ ಕೋವಿಡ್ ರೋಗವನ್ನು ಜಗತ್ತಿನಿಂದ ತೊಲಗಿಸಿ ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡು ಬ್ರಹ್ಮಕಲಶದ ಹೊಸ್ತಿಲಿನಲ್ಲಿದ್ದಾನೆ ಎಂದು ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

Call us

Call us

ಕೋಟೇಶ್ವರದ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ 62 ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ‍್ಯಕ್ರಮದ ಧಾರ್ಮಿಕ ಸಭಾ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Click here

Click Here

Call us

Call us

Visit Now

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್, ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಿದ್ವಾನ್ ಶ್ರೀಪತಿ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಗೌರವಧ್ಯಕ್ಷ ನೇರಂಬಳ್ಳಿ ಕೃಷ್ಣಮೂರ್ತಿ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಧ್ಯಕ್ಷ ನೇರಂಬಳ್ಳಿ ರಾಘವೇಂದ್ರ ರಾವ್, ಕೆ.ಶ್ರೀಧರ್ ಕಾಮತ್, ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ದೇವಳದ ಕಾರ‍್ಯನಿರ್ವಹಾಣಾಧಿಕಾರಿ ಗಣೇಶ್ ಗೌಡ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ವಾಮೀಜಿಯವರನ್ನು ಭವ್ಯ ಪುರಮೆರವಣಿಗೆಯಲ್ಲಿ ದೇವಳದ ತನಕ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಕಾರ‍್ಯಗಳಿಗೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಿ ಸನ್ಮಾನಿಸಿಲಾಯಿತು.

ಸುಧಾ ರಾಜಗೋಪಾಲ್ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಪ್ರಸ್ತಾವಿಕ ಮಾತನಾಡಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ‍್ಯಕ್ರಮ ನಿರೂಪಿಸಿದರು. ಕಾರ‍್ಯದರ್ಶಿ ಸುರೇಶ್ ಬೆಟ್ಟಿನ್ ವಂದಿಸಿದರು.

Call us

ಸಭಾ ಕಾರ‍್ಯಕ್ರಮದ ಬಳಿಕ ಕುಂದಾಪುರ ನಾಟ್ಯಾಲಯ ನೃತ್ಯ ವಸಂತ ಬಳಗದಿಂದ ನೃತ್ಯ ವೈಭವ ಹಾಗೂ ಕುಂದಾಪುರ ಗಮಕ ಪರಿಷತ್ ಬಳಗದಿಂದ ಗಮಕವಾಚನ ಜರುಗಿತು.

ಈ ಕ್ಷೇತ್ರದಲ್ಲಿ ಸುಂದರವಾದ ಧ್ವಜಮರವನ್ನು ತಾಮ್ರದ ಹೊದಿಕೆಯೊಂದಿಗೆ ಪ್ರತಿಷ್ಠಾಪಿಸಲಾಗಿದೆ. ಈ ಎಲ್ಲಾ ಉತ್ಸವಗಳು

ಕೇವಲ ದೇವರ ಉತ್ಸವಗಳಲ್ಲ. ಅದು ನಮ್ಮೂರಿನ ಉತ್ಸವವೆಂದು ತಿಳಿದು ದೇವರ ಕಾರ‍್ಯದಲ್ಲಿ ಭಾಗವಹಿಸಬೇಕು. ಈಗಾಗಲೇ ನೂತನ ಧ್ವಜಸ್ಥಂಭದ ಮೂಲಕ ಕೋಟಿಲಿಂಗೇಶ್ವರನ ಬ್ರಹ್ಮಕಲಶೋತ್ಸವದ ಆಮಂತ್ರಣ ಕಾಗದವು ಧ್ವಜಾರೋಹಣದ ಮೂಲಕ ಎಲ್ಲಾ ದೇವರುಗಳಿಗೆ ತಲುಪಿದ್ದು10 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಎಲ್ಲಾ ದೇವರಗಳು ಕೋಟೇಶ್ವರದಲ್ಲಿದ್ದು ಭಕ್ತರನ್ನು ಹರಸುತ್ತಾರೆ. – ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ

Leave a Reply

Your email address will not be published. Required fields are marked *

16 + 7 =