ಕೋಟೇಶ್ವರ ಶ್ರೀ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ನೂತನ ಧ್ವಜಸ್ಥಂಭ ಪ್ರತಿಷ್ಠಾಪನೆ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಪ್ತ ಮೋಕ್ಷಪ್ರದ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ೬೭ ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ‍್ಯಕ್ರಮದ ಸಂದರ್ಭ ಸುಮಾರು ೭೩ ಅಡಿ ಎತ್ತರದ ನೂತನ ಧ್ವಜಸ್ಥಂಭ ಪ್ರತಿಷ್ಠಾಪನೆಯನ್ನು ದೇವಳದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ಇವರ ನೇತೃತ್ವದಲ್ಲಿ ಗುರುವಾರ ಕುಂಭ ಲಗ್ನದಲ್ಲಿ ಪ್ರತಿಷ್ಠಾಪಿಸಲಾಯಿತು.

Call us

Call us

ಪುಣ್ಯಾಹವಾಚನ, ಧ್ವಜಪ್ರತಿಷ್ಠಾ ಕಲಶ ಸ್ಥಾಪನೆ, ಪ್ರತಿಷ್ಠಾ ಹೋಮ, ಕಲಶಾಭಿಷೇಕ ಪೂಜಾ, ಗಣಪತಿ ಪ್ರಾರ್ಥನೆ, ಶ್ರೀ ದೇವರ ಪ್ರಾರ್ಥನೆ, ಧ್ವಜಾರೋಹಣ, ಶತರುದ್ರ ಕಲಶ ಸ್ಥಾಪನೆ, ಶತರುದ್ರ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಬಲಿ ಉತ್ಸವ, ರಾತ್ರಿ ಗಣಪತಿ ಪ್ರಾರ್ಥನೆ, ಯಾಗಶಾಲೆಯಲ್ಲಿ ಪುಣ್ಯಾಹವಾಚನ, ಮಂಟಪ ಸಂಸ್ಕಾರ, ಅಗ್ನಿಜನನ ಹೋಮ, ದಿಶಾ ಹೋಮ, ರಜ್ಜು ಬಂಧನ, ಅಸ್ತ್ರ ಕಲಶ ಸ್ಥಾಪನೆ, ಬಿಂಬ ಶುದ್ದಿ ಕಲಶ ಸ್ಥಾಪನೆ, ಭೇರಿತಾಡನ, ಕೌತುಕ ಬಂಧನ, ದೊಡ್ಡ ರಂಗಪೂಜೆ, ಪುಷ್ಪ ರಥೋತ್ಸವ, ಪನ್ನಗ ವಾಹನೋತ್ಸವ ಇನ್ನಿತರ ಧಾರ್ಮಿಕ ಕಾರ‍್ಯಕ್ರಮಗಳು ಜರುಗಿದವು.

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಜೇರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್, ಗೌರವಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ ಮಾರ್ಕೋಡು, ಬ್ರಹ್ಮಕಲಶೋತ್ಸವ ಸಮಿತಿ ಕಾರ‍್ಯದರ್ಶಿ ಸುರೇಶ್ ಬೆಟ್ಟಿನ್, ದೇವಳದ ಕಾರ‍್ಯನಿರ್ವಹಾಣಾಧಿಕಾರಿ ಗಣೇಶ್ ಗೌಡ, ಸಮಿತಿ ಪ್ರಮುಖರಾದ ಪ್ರಭಾಕರ ಬಿ ಕುಂಭಾಸಿ, ಗಣೇಶ್ ಭಟ್ ಗೋಪಾಡಿ, ಶಿಲ್ಪಿ ರಾಜಗೋಪಾಲ ಆಚಾರ್ಯ, ಸ್ವಾಗತ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ, ಉಪಸಮಿತಿ ಸದಸ್ಯರು, ಸದ್ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

5 × 4 =