ಕೋಟ ಅಮೃತೇಶ್ವರೀ ದೇಗುಲ: ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರ ಪುನರಾಯ್ಕೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:  ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ಮುಂದಿನ ಮೂರು ವರ್ಷಗಳ ಆಡಳಿತಾವಧಿಗೆ 9 ಮಂದಿ ಸದಸ್ಯರನ್ನೊಳಗೊಂಡ ನೂತನ ವ್ಯವಸ್ಥಾಪನ ಸಮಿತಿಯನ್ನು ರಾಜ್ಯ ಸರಕಾರ ಧಾರ್ಮಿಕ ಪರಿಷತ್ ನೇಮಕ ಮಾಡಿ ಆದೇಶ ಹೊರಡಿಸಿದ್ದು, ವ್ಯವಸ್ಥಾಪನ ಸಮಿತಿಯ ಪ್ರಥಮ ಸಭೆಯಲ್ಲಿ ಆನಂದ್ ಸಿ. ಕುಂದರ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸದಸ್ಯರೆಲ್ಲರೂ ಸರ್ವಾನುಮತದಿಂದ ಪುನರಾಯ್ಕೆ ಮಾಡಿದ್ದಾರೆ.

Call us

ಒಟ್ಟು 43 ಮಂದಿ ಆಕಾಂಕ್ಷಿಗಳು ಸಮಿತಿಯ ಸದಸ್ಯರಾಗಲು ಅರ್ಜಿ ಸಲ್ಲಿಸಿದ್ದು ಇವರಲ್ಲಿ ಓರ್ವ ಪ್ರಧಾನ ಅರ್ಚಕರು ಹಾಗೂ ಸಾಮಾನ್ಯ ವರ್ಗದಿಂದ ಆನಂದ್ ಸಿ. ಕುಂದರ್, ರಾಮದೇವ ಐತಾಳ್, ಸುಬ್ರಾಯ ಆಚಾರ್ಯ, ಸತೀಶ್ ಹೆಗಡೆ, ಚಂದ್ರ ಪೂಜಾರಿ ಕದ್ರಿಕಟ್ಟು ಹಾಗೂ ಮಹಿಳಾ ಮೀಸಲಾತಿಯಲ್ಲಿ ಜ್ಯೋತಿ ಬಿ. ಶೆಟ್ಟಿ ಸುಶೀಲಾ ಸೋಮಶೇಖರ್, ಎಸ್. ಸಿ ಕೋಟಾದಿಂದ ಸುಂದರ್ ಕೆ. ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

10 − two =