ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಬಸ್ಸು ನಿಲ್ದಾಣ ಸಮೀಪ ವ್ಯಕ್ತಿಯೋರ್ವ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ಕಡೆಯಿಂದ ಬಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ. ಮೃತರನ್ನು ಗೋಪಾಲ ಮೊಗವೀರ ಹಳವಳ್ಳಿ ಎಂದು ಗುರುತಿಸಲಾಗಿದೆ.
ಕೋಟೇಶ್ವರದಲ್ಲಿ ತನ್ನ ಕ್ಯಾಂಟಿನ್ ಕೆಲಸ ಮುಗಿಸಿಕೊಂಡು ಕೋಟದಲ್ಲಿರುವ ಹೆಂಡತಿ ಮನೆಗೆ ತೆರಳುತ್ತಿದ್ದ ಗೋಪಾಲ, ರಸ್ತೆ ದಾಟುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಹಿಂದೂ ಸಂಘಟನೆಯ ಮುಖಂಡ ಅರವಿಂದ ಕೋಟೇಶ್ವರ ಕಾರನ್ನು ಹಿಂಬಾಲಿಸಿ ಕೋಟೇಶ್ವರ ಪೆಟ್ರೋಲ್ ಬಂಕ್ ಬಳಿ ಅಡ್ಡಗಟ್ಟಿದ್ದಾರೆ. ಮೃತ ಗೋಪಾಲ ಮೊಗವೀರ ಪತ್ನಿ, ತಂದೆ ತಾಯಿ ಅಗಲಿದ್ದಾರೆ.