ಕೋಟ: ಪ್ರಕಾಶ್ ರೈ ವಿರುದ್ಧ ಪ್ರತಿಭಟನೆಗೆ ಮುಂದಾದವರ ಬಂಧನ. ಬಿಗು ಬಂದೋಬಸ್ತ್ ನಡುವೆ ನಡೆದ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕಾರ ಸಮಾರಂಭಕ್ಕೆ ಆಗಮಿಸಿದ್ದ ನಟ ಪ್ರಕಾಶ್ ರೈ ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದವರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡು ಘಟನೆ ನಡೆಯಿತು. ಪ್ರತಿಭಟನೆ ನಡೆಸುವ ಮುನ್ಸೂಚನೆ ಇದ್ದಿದ್ದರಿಂದ ಕೋಟದಲ್ಲಿ ಬೀಗು ಬಂದೋವಸ್ತ್ ಏರ್ಪಡಿಸಲಾಗಿತ್ತು.

Call us

Call us

ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ವಿಶೇಷ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳವಾರ ಮುಂಜಾನೆಯಿಂದಲೇ ಪೊಲೀಸ್‌ರು ಕಾರಂತ ಥೀಂ ಪಾರ್ಕ್ ಬಂದೋ ಬಸ್ತಿನಲ್ಲಿ ತೊಡಗಿದ್ದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ ಪಾಟೀಲ್ ಅವರ ನೇತೃತ್ವದಲ್ಲಿ ಕಾರಂತ ಥೀಂ ಪಾರ್ಕ್‌ನ ಭದ್ರತೆಗೆ ವ್ಯವಸ್ಥೆ ಕಲ್ಪಿಸಲಾಯಿತು. ಪ್ರತಿಭಟನೆಗೆ ಮುಂದಾದವರನ್ನು ಬಂಧಿಸಿ ಕೊನೆಗೆ ಬಿಡುಗಡೆಗೊಳಿಸಲಾಯಿತು.

Call us

Call us

ಕೋಟತಟ್ಟು ಪಂಚಾಯತ್ ಮತ್ತು ಕಾರಂತ ಹುಟ್ಟೂರ ಪ್ರತಿಷ್ಠಾನ ನೀಡುವ ಕಾರಂತ ಹುಟ್ಟೂರ ಪ್ರತಿಷ್ಠಾನ ವಿಚಾರವಾಗಿ ಎದ್ದಿರುವ ವಿವಾದ ಹಿನ್ನಲೆಯಲ್ಲಿ ಮಂಗಳವಾರ ವಿಶೇಷ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದ ಬಳಿಕ, ಅವರು ಸಾರ್ವಜನಿಕ ಸಭೆಯಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಿ ಹಿಂದೂಪರ ಸಂಘಟನೆಗಳು, ಬಿಜೆಪಿಯವರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಕುರಿತು ಹೇಳಿಕೆ ನೀಡಿದ್ದರು. ಅಲ್ಲದೇ ಪ್ರಶಸ್ತಿಗೆ ಈ ಬಾರಿ ಆಯ್ಕೆ ಮಾಡಿದ ಪ್ರಕಾಶ್ ರೈ ಅವರಿಗೆ ಕಾರಂತರ ಹೆಸರಿನ ಪ್ರಶಸ್ತಿ ನೀಡದಂತೆ ಒತ್ತಾಯಿಸಿತ್ತು. ಆದರೆ ಪ್ರಶಸ್ತಿ ಆಯ್ಕೆ ಸಮಿತಿ ನಟ ನಿರ್ದೇಶಕ ಪ್ರಕಾಶ್ ರೈ ಆಯ್ಕೆ ಮಾಡಿದ್ದು, ಇದೇ ವಿಚಾರ ಪ್ರತಿಷ್ಠಾನ ಮತ್ತು ಕೋಟತಟ್ಟು ಪಂಚಾಯತ್ ದೃಢವಾಗಿರುವುದಾಗಿಯೂ ಮತ್ತು ನಿರ್ಧಾರಿತ ದಿನದಂದೆ ಪ್ರಶಸ್ತಿ ನೀಡುವ ಕುರಿತು ಹೇಳಿಕೆ ನೀಡ ಬೆನ್ನಲ್ಲಿ, ಪರ ಮತ್ತು ವಿರೋಧದ ಕಾವು ಏರಿತ್ತು.

Leave a Reply

Your email address will not be published. Required fields are marked *

nineteen + 2 =