ಕೋಟ ಮೊಗವೀರ ಸಂಘಟನೆ: ಬೃಹತ್ ಸ್ವಚ್ಚತಾ ಅಭಿಯಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ : ಮೊಗವೀರ ಯುವ ಸಂಘ ಹಾಗೂ ಮಹಿಳಾ ಘಟಕ ಕೋಟ ಇವರುಗಳ ಆಶ್ರಯದಲ್ಲಿ ಕೋಟ ವ್ಯಾಪ್ತಿಯ ಹಿಂದೂ ರುದ್ರಭೂಮಿ ಸ್ವಚ್ಚಗೊಳಿಸುವ ಕಾರ್ಯಕ್ರಮ ನಡೆಯಿತು.

Call us

Call us

ಕಾರ್ಯಕ್ರಮಕ್ಕೆ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಚಾಲನೆ ನೀಡಿ ಮಾತನಾಡಿ ಮೊಗವೀರ ಸಂಘಟನೆ ರಕ್ತದಾನ ಶಿಬಿರಗಳ ಮೂಲಕ ಹೊಸ ದಾಖಲೆಯನ್ನು ಸೃಷ್ಠಿಸಿ ಇತರ ಸಮಾಜ ಮುಖಿ ಕಾರ್ಯಕ್ಕೂ ಸೈ ಎನಿಸಿದೆ ಆ ಮೂಲಕ ಇತರ ಸಂಘಗಳಿಗೆ ಮಾದರಿಯಾಗಿದೆ

Call us

Call us

ಅಲ್ಲದೆ ಜಿಲ್ಲಾದ್ಯಂತ ಮೊಗವೀರ ಸಂಘಟನೆಯ ಮೂಲಕ ಬೃಹತ್ ಮಟ್ಟದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ನಾಡೋಜ ಡಾ. ಜಿ ಶಂಕರ್ ಕರೆಕೊಟ್ಟ ಹಿನ್ನಲೆಗೆ ವಿವಿಧ ಘಟಕಗಳ ಮೂಲಕ ಹಿಂದೂ ರುದ್ರಭೂಮಿ ಸ್ವಚ್ಚಗೊಳಿಸಲು ಕಾರ್ಯದಲ್ಲಿ ತೋಡಗಿರುವುದು ಪ್ರಶಂಸನೀಯ ಇದು ಇನ್ನೂ ವಿಸ್ತರಿಸಿ ಮುಂದಿನ ದಿನಗಳಲ್ಲಿ ಇತರ ಸಂಘಗಳ ಮೂಲಕ ಸ್ಥಳೀಯ ಪರಿಸರವನ್ನು ಸ್ವಚ್ಚಗೊಳಿಸಲು ಕರೆ ನೀಡಿದರು

ಮೊಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷ ಎಮ್.ಎಸ್ ಸಂಜೀವ, ಜಿಲ್ಲಾ ಘಟಕದ ಉಪಾಧ್ಯಕ್ಷ ಯತೀಶ್ ಕಿದಿಯೂರ್,ಕೃಷ್ಣ ಮರಕಾಲ ಸಾಲಿಗ್ರಾಮ ,ಕೋಟ ಘಟಕದ ಅಧ್ಯಕ್ಷ ಗಿರೀಶ್ ಬಂಗೇರ ಕಾರ್ಯದರ್ಶಿ ರಂಜೀತ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಗುಲಾಬಿದಾಸ್ ಬಂಗೇರ, ಕಾರ್ಯದರ್ಶಿ ಸರೋಜ ,ಮಾಜಿ ಅಧ್ಯಕ್ಷರುಗಳಾದ ಶಿವರಾಂ ಕೆ.ಎಂ, ರಮೇಶ್ ವಿ ಕುಂದರ್,ಸುರೇಶ್ ಮರಕಾಲ,ಮಾಜಿ ಕಾರ್ಯದರ್ಶಿ ಯೋಗೆಂದ್ರ ತಿಂಗಳಾಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಕೋಟತ್ತಟ್ಟು ಗ್ರಾಮಚಾಯತ್ ಸಹಕಾರ ನೀಡಿತು.

ಆನಂದ್ ಸಿ ಕುಂದರ್ ಹೇಳಿಕೆ -ಗೀತಾನಂದ ಪೌಂಡೇಶನ್ ವತಿಯಿಂದ ಕೋಟ ಹಿಂದೂರುದ್ರ ಭೂಮಿಗೆ ತ್ಯಾಜ್ಯಗಳನ್ನು ಹಾಕಲು ತೋಟ್ಟಿಯನ್ನು ವ್ಯವಸ್ಥೆ ಮಾಡಲಾಗಿದೆ ಇದರಿಂದ ಅಲ್ಲಲ್ಲಿ ಎಸೆಯುವುದು ತಪ್ಪುತ್ತದೆ. ಆಯಾ ಪರಿಸರವನ್ನು ಸ್ವಚ್ಚಗೊಳಿಸಲು ಆ ಊರಿನಲ್ಲಿರುವ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಇದು ವ್ಯಾಪಕವಾಗಿ ಹರಡಿದ ಮೇಲೆ ಪ್ರತಿಯೊಂದು ಮನೆಗಳಲ್ಲಿ ಇದರ ಪರಿಣಾಮ ಬೀರುತ್ತದೆ ಆಗ ಶುಚಿಯಾದ ವಾತಾವರ್ಣ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ

Leave a Reply

Your email address will not be published. Required fields are marked *

13 − thirteen =