ಕೋಟ ಮೋಗವೀರ ಯುವ ಸಂಘಟನೆ: ಬೃಹತ್ ರಕ್ತದಾನ ಶಿಬಿರ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರಕ್ತದಾನ ಮಾಡಿದರೆ ಜೀವಕ್ಕೆ ಹಾನಿಗಾಗಬಹುದೆಂಬ ಭಯದ ವಾತವರಣ ಮೊದಲು ಇದ್ದಿತ್ತು ಆದರೆ ಮೊಗವೀರ ಯುವ ಸಂಘಟನೆ ಸತತ ರಕ್ತದಾನ ಕಾರ್ಯಕ್ರಮಗಳ ಮೂಲಕ ಅದನ್ನು ಹೋಗಲಾಡಿಸಿವೆ ಇವರ ಕಾರ್ಯ ಶ್ಲಾಘನೀಯ. ಎಂದು ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದ್ದಾರೆ.

Call us

Call us

ಮೋಗವೀರ ಯುವ ಸಂಘ, ಮಹಿಳಾ ಘಟಕ ಕೋಟ ಹಾಗೂ ಡಾ.ಜಿ.ಶಂಕರ್ ಫ್ಯಾಮೀಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ಗೀತಾನಂದ ಪೌಂಡೇಶನ್ ಮಣೂರು ಪಡುಕರೆ ,ಜನತಾ ಫಿಶ್‌ಮೀಲ್ ಎಂಡ್ ಆಯಿಲ್ ಪ್ರೋಡಕ್ಟ್ ಕೋಟ,ಕೆ.ಎಂ.ಸಿ ಮಣಿಪಾಲ ಮತ್ತು ಉಡುಪಿ ಜಿಲ್ಲಾಡಳಿತಗಳ ಸಯುಂಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸೋಮವಾರ ಸರಕಾರಿ ಸಯುಂಕ್ತ ಪ್ರೌಡ ಶಾಲೆ ಮಣೂರು ಪಡುಕರೆಯಲ್ಲಿಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರಕ್ತದಾನ ಮಾಡುವುದರಿಂದ ನಮ್ಮ ದೇಹದ ಚೈತನ್ಯ ಪಡೆಯುದರೊಂದಿಗೆ ಇನ್ನೂಬ್ಬರ ಜೀವ ಉಳಿಸಿದಂತೆ ಆಗುತ್ತದೆ. ರಕ್ತದಾನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಸಂಘ ಸಂಸ್ಥೆಗಳು ಸಮಾಜ ಮುಖಿ ಕಾರ್ಯದಲ್ಲಿ ಇನ್ನಷ್ಟು ತೋಡಗಿಕೊಳ್ಳಬೇಕಿದೆ ಆಗ ಮಾತ್ರ ನಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಕಾಣಬಹುದು ಎಂದರು.

ಈ ಸಂದರ್ಭದಲ್ಲಿ ಎಸ್.ಎಫ್.ಎಲ್ ಇಂಡಿಯಾ ಸಂಸ್ಥೆಯಲ್ಲಿ ಜರ್ಮನ್ ಮೂಲದ ಸಮಾಜ ಸೇವಕರಾದ ಸ್ವನ್,ಅಂಜಲಿನಾ ರವರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಿರೀಶ್ ಬಂಗೇರ ವಹಿಸಿದರು. ಮುಖ್ಯ ಅಥಿತಿಗಳಾಗಿ ಮೊಗವೀರ ಯುವ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಮಾಜಿ ಜಿಲ್ಲಾಧ್ಯಕ್ಷ ಸಂಜೀವ ಎಮ್ ಎಸ್,ಕೋಟ ಘಟಕದ ನಿಕಟ ಪೂರ್ವ ಅಧ್ಯಕ್ಷ ರಮೇಶ್ ವಿ.ಕುಂದರ್, ಮಹಿಳಾ ಘಟಕದ ನಿಕಟ ಪೂರ್ವ ಅಧ್ಯಕ್ಷೆ ಸುಜಾತ ಗೋಪಾಲ್, ಮಹಿಳಾ ಘಟಕದ ಅಧ್ಯಕ್ಷೆ ಗುಲಾಬಿ ದೇವದಾಸ, ಕೆ ಎಂ ಸಿ ಮಣಿಪಾಲದ ಡಾ. ಪ್ರಥ್ವಿರಾಜ್,ಸರಕಾರಿ ಸಯುಂಕ್ತ ಪ್ರೌಡಶಾಲಾ ಮುಖ್ಯ ಶಿಕ್ಷಕ ಪ್ರಕಾಶ್ ಹೆಬ್ಬಾರ್, ಜನತಾ ಫಿಶ್‌ಮೀಲ್ ಎಚ್ ಆರ್ ಶಿಲ್ಪಾ, ಕೃಷಿಕ ರವೀಂದ್ರ ಐತಾಳ್,ಲಕ್ಷ್ಮಿ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಲಿನ ಪ್ರಾಂಶುಪಾಲ ರಾಜೇಂದ್ರ ಎಸ್ ನಾಯಕ್,ಉದ್ಯಮಿ ಜಯಂತ್ ಅಮೀನ್ ಕೋಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಂಜೀತ್ ಕುಮಾರ್ ಸ್ವಾಗತಿಸಿದರು.ಕಾರ್ಯಕ್ರಮವನ್ನು ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಕೆ ನಿರೂಪಿಸಿ ವಂದಿಸಿದರು.

Call us

Call us

Leave a Reply

Your email address will not be published. Required fields are marked *

3 × two =