ಕೋಟ ಹೋಬಳಿ ಜನಸ್ಪಂದನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜನರ ಸೇವೆಗೆಂದೇ ಇರುವುದು. ಜನರ ನೀಡಿದ ತೆರಿಗೆ ಹಣದಿಂದಲೇ ನಮ್ಮ ಈ ವ್ಯವಸ್ಥೆಗೆ ಸಂಬಳ ಬರುತ್ತಿದೆ ಎನ್ನುವುದನ್ನು ನಾವು ಮರೆಯಬಾರದು, ಇಲ್ಲಿ ಪ್ರಜೆಗಳೆ ಪ್ರಭುಗಳು. ಕಾಲಮಿತಿಯ ಒಳಗೆ ತಕ್ಷಣ ಜನರ ಸಮಸ್ಯೆಗಳಿಗೆ ನಾವು ಅಧಿಕಾರಿಗಳು ಸ್ಪಂದಿಸಬೇಕಾದ ಅಗತ್ಯತೆ ಇದೆ. ನಮ್ಮೀ ಜಿಲ್ಲೆಯಲ್ಲಿ ಭೃಷ್ಟಾಚಾರ ರಹಿತ ಆಡಳಿತವನ್ನು ನಡೆಸಿ, ರಾಜ್ಯದಲ್ಲಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಸಾಲಿಗ್ರಾಮ ಗಿರಿಜಾ ಕಲ್ಯಾಣಮಂಟಪದಲ್ಲಿ ನಡೆದ ಕೋಟ ಹೋಬಳಿ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಕಳೆದ ೩ವರ್ಷಗಳಲ್ಲಿ ಅನೇಕ ಜನಹಿತ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.ಉಡುಪಿ ಜಿಲ್ಲೆಯಲ್ಲಿ ೬೪ಸಾವಿರ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗಿದೆ. ಉಚಿತ ಅಕ್ಕಿ, ಹೈನುಗಾರರಿಗೆ ಸಬ್ಸಿಡಿ, ಕ್ಷೀರಭಾಗ್ಯ, ಶೂ ಭಾಗ್ಯ, ಮನಸ್ವಿನಿ ಯೋಜನೆ, ಇತ್ತೀಚೆಗೆ ಬಂದ ಬಾಪೂಜಿ ಸೇವಾ ಯೋಜನೆಯಂತಹ ಅನೇಕ ಜನಪರ ಕಾರ್ಯಕ್ರಮಗಳು ಜನರನ್ನು ತಲುಪಿವೆ ಎಂದರು.

Call us

Call us

Call us

೯೪ಸಿ ಯಡಿಯಲ್ಲಿ ಇನ್ನೂ ಒಂದು ತಿಂಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದವರಿಗೆ ಸಂಪೂರ್ಣ ಉಚಿತವಾಗಿ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಅವರು ಹೇಳಿದರು. ಇದೇ ಸಂದರ್ಭ ಕೋಟ ಹೋಬಳಿಯ ೧೪ಗ್ರಾಮಗಳ ೧೨೬ ಮಂದಿಗೆ ಸಂಧ್ಯಾ ಸುರಕ್ಷೆ, ೫೦ ವಿಧವಾ ವೇತನ, ೧೨ ಮನಸ್ವಿನಿ ಮತ್ತು ೧೦ ಮಂದಿಗೆ ಅಂಗವಿಕಲ ವೇತನ ವಿತರಿಸಿದರು. ಅಲ್ಲದೇ ವಿವಿಧ ಫಲಾನುಭವಿಗಳಿಗೆ ವಿವಿಧ ಯೋಜನೆಯ ಸವಲತ್ತುಗಳನ್ನು ವಿತರಿಸಲಾಯಿತು.

ಸಭೆಯಲ್ಲಿ ೯/೧೧ ಸಮಸ್ಯೆಯಿಂದಾಗಿ ಉಂಟಾಗುತ್ತಿರುವ ಹಕ್ಕುಪತ್ರ ಸಮಸ್ಯೆ, ಮರುಳುಗಾರಿಕೆಯ ರಾಜಧನ ಪಂಚಾಯಿತಿಗೆ ವರ್ಗಾವಣೆಯಾಗದೆ ಇರುವುದು, ರಜತಾದ್ರಿಯಲ್ಲಿನ ಖಜಾನೆಯಲ್ಲಿ ತೆರಿಗೆ ತುಂಬಿಸಲು ಉಡುಪಿಗೆ ಬಂದು ಚಲೆನ್ ತುಂಬಿಸುವ ವ್ಯವಸ್ಥೆ ನಿಲ್ಲಿಸಿ ಮಣಿಪಾಲದಲ್ಲಿಯೇ ಆ ವ್ಯವಸ್ಥೆ ಕಲ್ಪಿಸುವುದು, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ತೋಡ್ಕಟ್ಟು ಸೇತುವೆ ನಿರ್ಮಾಣ ಕುರಿತು, ೯೪ಸಿ ಮತ್ತು ೯೪ಸಿಸಿ ಸಮಸ್ಯೆಗಳ ಕುರಿತು, ಕೋಡಿ ಬೇಂಗ್ರೆಯಲ್ಲಿನ ಗ್ರಾಮ ಪಂಚಾಯಿತಿ ಬದಲಾವಣೆ, ಸರಕಾರಿ ಆಸ್ಪತ್ರೆ, ಮೀನುಗಾರಿಕಾ ಬಂದರು, ಬಾರ್ಜ್‌ಸೇವೆ, ಹಕ್ಕುಪತ್ರ ಮೊದಲಾದ ವಿಚಾರಗಳ ಕುರಿತು ಸಚಿವರಿಗೆ ಮನವಿ ನೀಡಲಾಯಿತು. ಸಭೆಯಲ್ಲಿಯೇ ಸಚಿವರು ಸಂಬಂಧಪಟ್ಟ ಇಲಾಖೆಯವರನ್ನು ಕರೆಯಿಸಿ ಸ್ಥಳದಲ್ಲಿಯೇ ಪರಿಹಾರ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಎಸ್.ಅಶ್ವಥಿ, ಉಡುಪಿ ತಹಶೀಲ್ದಾರ್ ಮಹೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ಸದಸ್ಯ ಭುಜಂಗ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಸುಮತಿ ನಾಯರಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮತ್ತು ಕೋಟ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಸ್ಥಿತರಿದ್ದರು. ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಎಸ್. ಸ್ವಾಗತಿಸಿದರು. ಸುಧಾಕರ ರಾವ್ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

fourteen + six =