ಕೋಡಿಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಉದ್ಘಾಟನೆ

Call us

Call us

ಕುಂದಾಪುರ: ಸಮಾಜ ಸೇವಾ ಸಂಘಗಳನ್ನು ಕಟ್ಟುವುದರೊಂದಿಗೆ ಸಮಾಜದ ಎಲ್ಲರನ್ನೂ ಮುಖ್ಯವಾಹಿನಿಗೆ ತರುವುದರೊಂದಿಗೆ ಶೈಕ್ಷಣಿಕ, ಸಾಮಾಜಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಉದ್ದೇಶ ಸಂಘಟನೆ ಹಿಂದಿರಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಹೇಳಿದರು.

Click here

Click Here

Call us

Call us

Visit Now

Call us

Call us

ಕೋಡಿ ಬಿಲ್ಲವ ಸಮಾಜ ಸೇವಾ ಸಂಘವನ್ನು ಉದ್ಘಾಟಿಸಿ ಮಾತನಾಡಿ ಸಮುದಾಯದ ಮುಖಂಡರು ತೆಗೆದುಕೊಳ್ಳುವ ನಿರ್ಣಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಪಯೋಗವಾಗುವಂತಿರಬೇಕು. ಹಿರಿಯರ ಸ್ಥಾನವನ್ನು ತುಂಬಬಲ್ಲ ನಾಯಕತ್ವನ್ನು ಯುವಜನರು ಮೈಗೂಡಿಸಿಕೊಂಡರೇ ಮಾತ್ರ ಸಮಾಜದ ಏಳ್ಗೆ ಸಾಧ್ಯ ಎಂದರು.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಮಾತನಾಡಿ ಜಾತಿ ಸಮಾಜಗಳು ಅದರ ರಚನೆಯ ಹಿಂದಿರುವ ಉದ್ದೇಶ, ನಮ್ಮ ಯೋಚನೆ ಯೋಜನೆ ಕಲ್ಪನೆಗಳನ್ನು ಸಕಾರಗೊಳಿಸುವ ಸಹಕಾರಿ ವ್ಯವಸ್ಥೆಯಾಗಬೇಕೆಂಬುದು ನಮ್ಮ ಇಂಗಿತ. ಬಿಲ್ಲವ ಸಮಾಜದವರಿಗೆ ಶಕ್ತಿ, ಸಾಮಾಥ್ಯ, ಯೋಗ್ಯತೆ ಎಲ್ಲವೂ ಇದೆ. ಆದರೆ ಸಂಘಟನೆಗಳಿಗೆ ಬಲ ಬಂದಿಲ್ಲ. ಯುವಕರು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಬೇಕಾಗಿದೆ ಎಂದರು.

ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಜಿ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ಗುಣರತ್ನ, ಸಂದೀಪ ಪೂಜಾರಿ, ಶ್ರೀ ಚಕ್ರೇಶ್ವರ ದೇವಸ್ಥಾನದ ದರ್ಶನ ಪಾತ್ರಿ ಮಾಧವ ಎಂ. ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ್, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರಾಜು ಕೋಟ್ಯಾನ್, ಕುಂದಾಪುರ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಸುವರ್ಣ, ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಉಮೇಶ್ ಕಡ್ಗಿಮನೆ, ಕೋಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಕಾಳಪ್ಪ ಪೂಜಾರಿ, ಉಪಾಧ್ಯಕ್ಷ ರಂಜಿತ್ ಆರ್. ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು ಬೈಂದೂರು ಶಾಸಕ ಗೋಪಾಲ ಪೂಜಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯನ್ನು ಸನ್ಮಾನಿಸಲಾಯಿತು. ಅಶೋಕ್ ಪೂಜಾರಿ ಕೋಡಿ ಸ್ವಾಗತಿಸಿದರು. ಸುನಿಲ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆನಂದ ಪೂಜಾರಿ ನಿರೂಪಿಸಿದರು.

Kodi Billava Samaja Seva sanga Inaugurated (1) Kodi Billava Samaja Seva sanga Inaugurated (2) Kodi Billava Samaja Seva sanga Inaugurated (3) Kodi Billava Samaja Seva sanga Inaugurated (4) Kodi Billava Samaja Seva sanga Inaugurated (5) Kodi Billava Samaja Seva sanga Inaugurated (6)

Call us

Leave a Reply

Your email address will not be published. Required fields are marked *

2 × 5 =