ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕೋಡಿ ಕಡಲ ಕಿನಾರೆಯ ಲೈಟ್ ಹೌಸ್ ಬಳಿಯ ತಾತ್ಕಾಲಿಕವಾಗಿ ನಿರ್ಮಿಸಿದ ಹ್ಯಾಚರಿಯಿಂದ 72 ಕಡಲಾಮೆ ಮರಿಗಳು ಹೊರಬಂದು ಅರಬ್ಬಿ ಸಮುದ್ರವನ್ನು ಸೇರಿದೆ.
ಅರಣ್ಯ ಇಲಾಖೆಯು ಸೇವಾ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳಿಯರ ಸಹಕಾರದೊಂದಿಗೆ ನಡೆಸಿದ್ದ ರಕ್ಷಣಾ ಕಾರ್ಯಾಚರಣೆಯಲ್ಲಿ ಕಳೆದ ಜ. 22 ರಿಂದ ಮಾ. 3 ರವರೆಗೆ ಕಡಲಾಮೆ ಮೊಟ್ಟೆಗಳನ್ನು ಪತ್ತೆ ಮಾಡಲಾಗಿತ್ತು. ಅವುಗಳ ಸಂರಕ್ಷಣೆಗೆ ಸಮುದ್ರ ತೀರದಲ್ಲಿ 11 ನೈಸರ್ಗಿಕ ಹ್ಯಾಚರಿಯನ್ನು ನಿರ್ಮಿಸಿದ್ದಲ್ಲದೇ, ಕಾವಲು ನಿಯೋಜಿಸಲಾಗಿತ್ತು. ಹ್ಯಾಚರಿಯಿಂದ ಜನಿಸಿದ 72 ಮರಿಗಳನ್ನು ಮಂಗಳವಾರ ಸುರಕ್ಷಿತವಾಗಿ ಕಡಲಿಗೆ ಸೇರಿಸಲಾಗಿದೆ. ಈವರೆಗೆ ಒಟ್ಟು 7 ಹ್ಯಾಚರಿಗಳಿಂದ ಅಂದಾಜು 370 ಕ್ಕೂ ಅಧಿಕ ಮರಿಗಳು ಮೊಟ್ಟೆಯೊಡೆದು ಹೊರಬಂದು ಕಡಲು ಸೇರಿದೆ.ಕಡಲಾಮೆ ಮರಿಗಳನ್ನು ಕಡಲಿಗೆ ಸೇರಿಸುವ ಕಾರ್ಯಾಚರಣೆ ವೇಳೆ ರಾಜ್ಯ ಅರಣ್ಯ ಕಾರ್ಯ ಪಡೆ ಮುಖ್ಯಸ್ಥ, ಪಿಸಿಸಿಎಫ್ ಸಂಜಯಮೋಹನ್, ಅರಣ್ಯ ಉಪವಿಭಾಗದ ಡಿಎಫ್ಓ ಆಶೀಶ್ ರೆಡ್ಡಿ, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್ , ಹಸ್ತಾ ಶೆಟ್ಟಿ, ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿರುವ ಎಫ್.ಎಸ್.ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆ ಹಾಗೂ ಎಂಪ್ರಿ ಆರ್ ಝಡ್ ವರ್ಕರ್ಸ್ ಸಂಘಟನೆಯ ನಾಗರಾಜ್ ಶೆಟ್ಟಿ, ದಿನೇಶ್ ಸಾರಂಗ, ವೆಂಕಟೇಶ, ಲಕ್ಷ್ಮಣ ಪೂಜಾರಿ, ಸಚಿನ್ ಪೂಜಾರಿ, ರಾಘು ಬಂಗೇರಾ, ಭರತ್ ಖಾರ್ವಿ, ಸಂಪತ್, ಉದಯ್ ಖಾರ್ವಿ ಮೊದಲಾದವರು ಇದ್ದರು.