ಕೋಡಿ ಜನಸಂಪರ್ಕ ಸಭೆಯಲ್ಲಿ ಎಸ್ಪಿ ಅಣ್ಣಾಮಲೈ

Call us

Call us

ಕುಂದಾಪುರ: ‘ಸೂಕ್ಷ್ಮ ಸಂದರ್ಭಗಳಲ್ಲಿ ಭಾವುಕತೆಗೆ ಒತ್ತು ನೀಡದೆ ಜನರು ತಾಳ್ಮೆ ವಹಿಸ ಬೇಕು. ತತ್‌ಕ್ಷಣದ ಪ್ರತಿಕ್ರಿಯೆಯಿಂದ ಕೆಲವೊಮ್ಮೆ ತೊಂದರೆ ಎದುರಾಗುತ್ತದೆ’ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು. ಕೋಡಿ ಬ್ಯಾರೀಸ್ ಕಾಲೇಜು ಸಭಾಂಗಣದಲ್ಲಿ ಸಂಜೆ ಕುಂದಾಪುರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

Call us

Click here

Click Here

Call us

Call us

Visit Now

Call us

‘ಕೋಡಿ ಅತ್ಯಂತ ಮನಮೋಹಕ ಪ್ರದೇಶ. ಇಲ್ಲಿಗೆ ಜನರು ಶಾಂತಿ ಬಯಸಿ ಬರುತ್ತಾರೆ. ಕೋಡಿ ಜನರು ಕೂಡ ಶಾಂತಿ ಪ್ರಿಯರು. ಕೆಲವೊಮ್ಮೆ ಎದುರಾಗುವ ಸಮಸ್ಯೆಗಳನ್ನು ಊರಿನ ಜನರು ಬಗೆಹರಿ ಸಿಕೊಳ್ಳುವಷ್ಟು ಸಾಮರ್ಥ್ಯ ಪ್ರದರ್ಶಿ ಸಬೇಕು’ ಎಂದು ಅವರು ಹೇಳಿದರು.

ವ್ಯಾಟ್ಸ್‌ಅಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ವಿಷಯಗಳ ಕುರಿತು ವಿಚಾರ ವಿಮರ್ಶೆ ನಡೆಸಬೇಕು. ಇತ್ತೀಚೆಗಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣವನ್ನು ದುರುಪ ಯೋಗಪಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ಇಲಾಖೆ ತೀವ್ರ ನಿಗಾ ವಹಿಸುತ್ತಿದೆ ಎಂದರು.

ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ ಮಾತನಾಡಿ, 6 ತಿಂಗಳ ಹಿಂದೆ ಕೋಡಿಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಅಮಾ ಯಕರಿಗೆ ಸಮನ್ಸ್ ಜಾರಿಯಾಗಿದೆ. ಇಲಾಖೆಯೊಂದಿಗಿನ ಶಾಂತಿ ಮಾತುಕತೆ ಯಲ್ಲಿ ಪ್ರಕರಣ ಹಿಂಪಡೆದು ಕೊಳ್ಳುವ ಭರವಸೆ ನೀಡಲಾಗಿತ್ತು. ಈಗ ಸಮನ್ಸ್ ಬಂದಿರುವುದು ಇಲಾಖೆ ಕಾರ‌್ಯವೈಖರಿ ಬಗ್ಗೆ ಜನರಲ್ಲಿ ಅನುಮಾನ ಮೂಡಿದೆ ಎಂದರು.

ಹಿರಿಯ ನಾಗರಿಕ ಕೋಡಿ ಅಬ್ದುಲ್ಲಾ ಮಾತನಾಡಿ, ಉತ್ತಮ ಎಸ್ಪಿ ನಮಗೆ ದೊರಕಿರುವುದು ಖುಷಿಯಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ಜನಸ್ನೇಹಿ ಪ್ರವತ್ತಿಯಿಂದ ನಾಗರಿಕರು ನೆಮ್ಮದಿಯ ವಾತಾವರಣ ಕಂಡು ಕೊಳ್ಳುತ್ತಿದ್ದಾರೆ. ನಾಗರಿಕರು ಪೊಲೀಸರ ಜನಸ್ನೇಹಿ ಪ್ರವತ್ತಿಯ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು.

Call us

ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಪಿಎಸ್‌ಐ ನಾಸೀರ್ ಹುಸೇನ್, ಸಂಚಾರಿ ಠಾಣಾಧಿಕಾರಿ ಜಯಣ್ಣ, ತಾ.ಪಂ. ಸದಸ್ಯ ಮಂಜು ಬಿಲ್ಲವ, ಪುರಸಭೆ ಸದಸ್ಯೆ ಜ್ಯೋತಿ, ಗ್ರಾ.ಪಂ.ಸದಸ್ಯೆ ಜೆಸಿಂತಾ, ಮಹೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

16 − one =