ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಲಲಿತ ಕಲೆಗಳ ಪ್ರಾತ್ಯಕ್ಷಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲೆಗಳ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ಹರ್ಷಾ ಆಚಾರ್ ಕೋಟೇಶ್ವರ ಇವರು ವಿದ್ಯಾರ್ಥಿಗಳನ್ನು ಸಮ್ಮೇಳಿಸಿ ಟ್ರೆಡ್ ಆರ್ಟ್, ಏಕಪಾತ್ರಾಭಿನಯ, ಕರೋಕೆ ಗಾಯನ, ಜಾನಪದ ಗೀತೆ, ಉಭಯತಿಟ್ಟು ಯಕ್ಷಗಾನದ ಹೆಜ್ಜೆಯೊಂದಿಗೆ ಅಪೂರ್ವ ಸಂಭಾಷಣೆಯ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಮ್. ಅಬ್ದುಲ್ ರೆಹಮಾನ ವಹಿಸಿದ್ದರು.

ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಹಾಗೂ ಲಲಿತ ಕಲಾರಂಗದ ಸಂಯೋಜಕರಾದ ಡಾ. ಸಂದೀಪ ಕುಮಾರ ಶೆಟ್ಟಿ ಮತ್ತು ಲಲಿತ ಕಲಾರಂಗದ ವಿದ್ಯಾರ್ಥಿ ಕಾರ್ಯದರ್ಶಿ ಕುಮಾರಿ ಕಾವ್ಯಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ವಿಜಯ್ ಕುಮಾರ ಅತಿಥಿ ಪರಿಚಯಿಸಿ, ವಿದ್ಯಾರ್ಥಿ ಯಲ್ಲಪ್ಪ ಸ್ವಾಗತಿಸಿ, ವಿದ್ಯಾರ್ಥಿನಿ ನಮಿತಾ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

eleven + fourteen =