ಕೋಡಿ: ಯುವ ರೆಡ್‌ಕ್ರಾಸ್ ಘಟಕ ಉದ್ಘಾಟನೆ ಮತ್ತು ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಡಿ ಬ್ಯಾರೀಸ್ ಯುವ ರೆಡ್ ಕ್ರಾಸ್ ಘಟಕ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಇದರ ವತಿಯಿಂದ ಆರೋಗ್ಯಕರ ಜೀವನ ಶೈಲಿ ಎಂಬ ವಿಷಯದ ಬಗ್ಗೆ ಉಪನ್ಯಾಸವ ಬ್ಯಾರೀಸ್ ಕನ್‌ವೆನ್ಶನ್ ಹಾಲ್‌ನಲ್ಲಿ ಏರ್ಪಡಿಸಲಾಯಿತು.

ಕಾರ್ಯಕ್ರಮದ ಮುಖ್ಯ ಆತಿಥಿಯಾಗಿ ಭಾಗವಹಿಸಿದ ಡಾ. ಸೋನಿ ಮೆಡಿಕಲ್ ಪ್ರಾಕ್ಟೀಶನರ್ ಕುಂದಾಪುರ ಇವರು ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಕ್ಕಾಗಿ ಯಾವ ರೀತಿಯ ಮಾರ್ಗವನ್ನು ಅನುಸರಿಸಬೇಕು ಎಂಬ ಕುರಿತಾಗಿ ಮಾಹಿತಿಯನ್ನು ನೀಡದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹಾಜಿ. ಮಾಸ್ಟರ್ ಮಹಮ್ಮೂದ್ ಇವರು ವಹಿಸಿದರು. ಅಥಿತಿಗಳಾಗಿ ಎಸ್. ಜಯಕರ ಶೆಟ್ಟಿ, ಅಧ್ಯಕ್ಷರು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ, ಸೀತಾರಾಮ ಶೆಟ್ಟಿ ಕಾರ್ಯದರ್ಶಿ ಯುವ ರೆಡ್‌ಕ್ರಾಸ್ , ಶಿವರಾಮ ಶೆಟ್ಟಿ ಕೋಶಾಧಿಕಾರಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮತ್ತು ಗಣೇಶ್ ಆಚಾರ್ಯ, ಮುತ್ತಯ್ಯ ಶೆಟ್ಟಿ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಉಪಸ್ಥಿತರಿದ್ದರು. ಬ್ಯಾರೀಸ್ ಯುವ ರೆಡ್‌ಕ್ರಾಸ್ ಘಟಕದ ನೋಡಲ್ ಆಫೀಸಿರ್ ಹಾಗೂ ವಾಣಿಜ್ಯ ಉಪನ್ಯಾಸಕರಾದ ಮಹಮ್ಮದ್ ಮುಸ್ತಫ ಇವರು ಸ್ವಾಗತಿಸಿದರು. ವಿದ್ಯಾರ್ಥಿ ಮೊಹಮ್ಮದ್ ಆದಿಲ್ ತೃತೀಯ ಬಿ.ಸಿ.ಎ ವಂದಿಸಿದರು, ಶಬನಮ್ ಬೇಗಂ ತೃತೀಯ ಬಿ.ಕಾಂ ಕಾರ್ಯಕ್ರಮವನ್ನು ನಿರೂಪಿಸಿದರು. ‘

Leave a Reply

Your email address will not be published. Required fields are marked *

2 × 5 =