ಕೋಣಿ : ’ಕಲಾಂ’ರಿಗೊಂದು ’ಸಲಾಂ’ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಣಿಯ ಮಾತಾ ಮಾಂಟೆಸ್ಸೋರಿಯ ಪುಟಾಣಿಗಳಿಂದ ’ಕಲಾಂ’ರಿಗೊಂದು ’ಸಲಾಂ’ ಕಾರ್ಯಕ್ರಮ ಜರುಗಿತು. ದೇಶ ಕಂಡ ಅಪ್ರತಿಮ ವಿಜ್ಞಾನಿ, ಸರಳ ಸಜ್ಜನಿಕೆಯ ಸರದಾರ, ಜನರ ರಾಷ್ಟ್ರಪತಿ ಎಂದು ಖ್ಯಾತರಾದ ಎ.ಪಿ.ಜೆ ಅಬ್ದುಲ್ ಕಲಾಂರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಮಿಸುವುದರ ಮೂಲಕ ಮಾತಾ ಮಂಟೊಸೊರಿಯ ಚಿಣ್ಣರು ಕಲಾಂರಿಗೆ ಗೌರವ ಸಲ್ಲಿಸಿದರು. ಆ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ಚಂದ್ರ ಶೆಟ್ಟಿ ಚಿತ್ತೂರು ಇವರು ಮಾತನಾಡಿ, ಕಲಾಂ ಜಿಯವರ ಬದುಕಿನ ಆದರ್ಶಗಳು ನಮಗೆ ದಾರಿ ದೀಪವಾಗಬೇಕು. ಅವರ ಹೆಜ್ಜೆಯ ಗುರುತುಗಳು ನಮ್ಮ ಯಶಸ್ಸಿನ ಪಥವಾಗಬೇಕು ಎಂದರು. ಕಲಾಂ ರ ಬಾಲ್ಯದ ಕಥೆಗಳನ್ನು ಪುಟಾಣಿಗಳಿಗೆ ವಿವರಿಸಿದ ಅವರು ನೀವೂ ಕೂಡ ಕಲಾಂ ರಂತಾಗಬೇಕು ಎಂದು ಕರೆ ನೀಡಿದರು. ಆ ಸಂದರ್ಭದಲ್ಲಿ ಮಾತಾ ಮೊಂಟೆಸರಿಯ ಪ್ರಾಶುಂಪಾಲರು, ಶಿಕ್ಷಕಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

9 + 7 =