ಕೋಣಿ : ಮಾತಾ ಮಾಂಟೆಸ್ಸೋರಿಗೆ ಶಿಕ್ಷಣ ತಜ್ಞರ ಭೇಟಿ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣ ಕ್ಷೇತ್ರದಲ್ಲಿ ತನ್ನ ವೈಶಿಷ್ಟ್ಯತೆಯೊಂದಿಗೆ ಜಾಗತಿಕ ಮನ್ನಣೆಗೆ ಪಾತ್ರವಾದ ಮೊಂಟೆಸ್ಸೋರಿ ಶಿಕ್ಷಣದ ತಜ್ಞೆ ಮೊಂಟೆಸ್ಸೋರಿ ಯುನೈಟೆಡ್ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ ಸಾವಿರಾರು ಮೊಂಟೆಸ್ಸೋರಿ ಶಿಕ್ಷಕಿಯರನ್ನು ರೂಪಿಸುತ್ತಿರುವ ಸಾಧಕಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಶಿಕ್ಷಕಿ, ಬೆಂಗಳೂರಿನ ಮುನಿರಾ ಅಕ್ತರ್ ಅವರನ್ನು ಕೋಣಿಯ ಮಾತಾ ಮೊಂಟೆಸ್ಸೋರಿಯ ಆವರಣದಲ್ಲಿ ಪುಟಾಣಿಗಳು ಪುಷ್ಪ ಪಥದೊಂದಿಗೆ ಸ್ವಾಗತಿಸಿದರು. ಮಾತಾ ಮೊಂಟೆಸ್ಸೋರಿ ನಡೆಸುತ್ತಿರುವ ಮೊಂಟೆಸ್ಸೋರಿ ಸರ್ಟಿಫೀಕೆಟ್ ಕೋರ್ಸ್‌ನ ಪ್ರಯೋಗ ಪರೀಕ್ಷೆಯ ಪರಿವೀಕ್ಷಕರಾಗಿ ಆಗಮಿಸಿರುವ ಮುನಿರಾ ಅಕ್ತರ್‌ರವರ ಸಾಧನೆಯನ್ನು ಮನಗಂಡು ಶಾಲೆಯವತಿಯಿಂದ ಗೌರವ ಸನ್ಮಾನ ನೀಡಲಾಯಿತು.

Call us

Click Here

Click here

Click Here

Call us

Visit Now

Click here

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅತ್ಯಂತ ಪ್ರಭಾವಿ ಶಿಕ್ಷಣ ಶೈಲಿ ಎಂದೇ ಖ್ಯಾತವಾಗಿರುವ ಡಾ| ಮರೀಯಾ ಮಾಂಟೆಸ್ಸೋರಿಯವರ ಆವಿಷ್ಕಾರದ ಮೊಂಟೆಸ್ಸೋರಿ ಶಿಕ್ಷಣ ಪದ್ಧತಿ ಇತ್ತೀಚಿನ ದಿನಗಳಲ್ಲಿ ಭಾರತದ ನಗರಗಳಲ್ಲಿ ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಆದರೆ ಕೋಣಿಯಂತಹ ಗ್ರಾಮೀಣ ಭಾಗದಲ್ಲೂ ಸಂಸ್ಥೆಯನ್ನು ಹುಟ್ಟುಹಾಕಿ ಈ ಪರಿಸರದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಮಾತಾ ಮೊಂಟೆಸ್ಸೋರಿಯ ರೂವಾರಿಗಳಾದ ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಅವರ ಪತ್ನಿ ಭಾರತಿ ನಿಜಕ್ಕೂ ಅಭಿನಂದನಾರ್ಹರು. ಸದ್ದಿಲ್ಲದೆ ನಡೆಯುತ್ತಿರುವ ಶಿಕ್ಷಣ ಸೇವೆಯೊಂದಿಗೆ ತನ್ನ ಉತ್ಕೃಷ್ಟ ತರಭೇತಿಯೊಂದಿಗೆ ಅನೇಕ ಮಾಂಟೆಸ್ಸೋರಿ ಶಿಕ್ಷಕಿಯರನ್ನು ಸಮಾಜಕ್ಕೆ ನೀಡುತ್ತಿರುವ ಈ ಸಂಸ್ಥೆ ನಿಜಕ್ಕೂ ಶ್ಲಾಘನೀಯ. ಪೋಷಕರು ಹಾಗೂ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದು ಮಗುವಿನ ಕಲಿಕೆ ಅಥವಾ ಮಕ್ಕಳ ಪೋಷಣೆಯಲ್ಲಿ ಇದನ್ನು ಅಳವಡಿಸಿಕೊಳ್ಳಬಹುದು ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ, ಶಿಕ್ಷಕಿಯರು, ತರಬೇತಿ ಪಡೆಯುತ್ತಿರುವ ಶಿಕ್ಷಣಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

three × 4 =