ಕೋಮ ಸಾಮರಸ್ಯ ಕೆಡಿಸುವ ಸಂಸದೆ ಕರಂದ್ಲಾಜೆ ರಾಜೀನಾಮೆ ನೀಡಲಿ : ಶ್ಯಾಮಲಾ ಭಂಡಾರಿ ಆಗ್ರಹ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನ್ಯ ಸಂಸದೆ ಶೋಭಾ ಕರಂದ್ಲಾಜೆಯವರು ಸಂವಿಧಾನದ ರಕ್ಷಣೆಯಂತಹ ಜವಾಬ್ದಾರಿಯುತ ಹುದ್ದೆಯಾದ ಸಂಸದೆಯಾಗಿದ್ದು ಕೋಮು ಸಾಮರಸ್ಯ ಕೆಡುವಂತಹ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಗಲಭೆ ಪೀಡಿತ ಪ್ರದೇಶದಲ್ಲಿ ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯದವರನ್ನು ಎತ್ತಿಕಟ್ಟುತ್ತಿರುವುದು ಖಂಡನೀಯವಾಗಿದೆ. ಇವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದಾರೆ. ಗಲಭೆಯನ್ನು ತನ್ನ ಭಾಷಣದ ಮೂಲಕ ರಾಜ್ಯಾದ್ಯಂತ ಹಬ್ಬಿಸಲು ಪ್ರಯತ್ನಿಸಿರುವುದು ಹೊಣೆಗೇಡಿ ಮತ್ತು ಅಘಾತಕಾರಿ ವರ್ತನೆಯಾಗಿದೆ. ಸಂವಿಧಾನದ ಆಶಯದಂತೆ ಎಲ್ಲಾ ಧರ್ಮ ಮತ್ತು ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸಂಸದರಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆ ಕಾರಣಕ್ಕಾಗಿ ಅವರು ಈಗಿಂದೀಗಲೇ ರಾಜೀನಾಮೆ ನೀಡಬೇಕೆಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಶ್ಯಾಮಲಾ ಭಂಡಾರಿ ಆಗ್ರಹಿಸಿದ್ದಾರೆ.

Call us

Click Here

Click here

Click Here

Call us

Visit Now

Click here

ಎಲ್ಲಾ ಧರ್ಮಗಲ್ಲಿಯೂ ಒಳ್ಳೆಯವರು ಇರುವಂತೆ, ಕೆಟ್ಟವರೂ ಇದ್ದಾರೆ. ಯಾರೋ ಬೆರೆಳೆಣಿಕೆಯಷ್ಟು ಕಿಡಿಗೇಡಿಗಳು ಯಾವುದೋ ಆಮಿಷಕ್ಕೆ ಒಳಗಾಗಿ ಎಸಗುವ ದುಷ್ಕೃತ್ಯಗಳಿಗೊಸ್ಕರ ಇಡೀ ಒಂದು ಸಮುದಾಯವನ್ನೇ ದೂಷಿಸುವುದು ಸರಿಯಲ್ಲ. ದೇಶದ ಸಂವಿಧಾನದ ಪ್ರಕಾರ ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯನ್ನು ನೀಡಲಾಗುತ್ತದೆ. ಆದರೆ ಮಾನ್ಯ ಕರಂದ್ಲಾಜೆಯವರು ರಾಜ್ಯದ ಯಾವುದೇ ಭಾಗದಲ್ಲಿ, ಯಾವುದೇ ಘಟನೆ ಘಟಿಸಿದರೂ ಅದಕ್ಕೆ ಕಾಂಗ್ರೇಸ್ ಪಕ್ಷವೇ ಕಾರಣವೆಂದು ಹೇಳಿಕೆ ನೀಡುತ್ತಾರೆ. ಪದೇ ಪದೇ ಮುಖ್ಯ ಮುಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಾರೆ. ಆದರೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಮಾನ್ಯ ಕರಂದ್ಲಾಜೆಯವರು ಸಂಸದೆಯಾಗಿ ಮುಂದುವರೆಯುವ ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಮಾನ್ಯ ಕರಂದ್ಲಾಜೆಯವರು ದಕ್ಷಿಣಕನ್ನಡ ಮೂಲದವರಾಗಿದ್ದು ರಾಜಕೀಯ ಕಾರಣಗಳಿಗೋಸ್ಕರ ತನ್ನದೇ ಜಿಲ್ಲೆಯ ಸೌಹಾರ್ದತೆಯನ್ನು ಕೆಡಿಸುತ್ತಿರುವುದು ಖಂಡನೀಯ ವಿಚಾರ. ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉದ್ಭವಿಸಿರುವ ಗಲಭೆಯನ್ನು ತನ್ನ ಭಾಷಣದ ಮೂಲಕ ರಾಜ್ಯಾದ್ಯಂತ ಹಬ್ಬಿಸಲು ಪ್ರಯತ್ನಿಸಿರುವುದು ಹೊಣೆಗೇಡಿ ಮತ್ತು ಅಘಾತಕಾರಿ ವರ್ತನೆಯಾಗಿದೆ. ಸಂವಿಧಾನದ ಆಶಯದಂತೆ ಎಲ್ಲಾ ಧರ್ಮ ಮತ್ತು ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸಂಸದರಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆ ಕಾರಣಕ್ಕಾಗಿ ಅವರು ಈಗಿಂದೀಗಲೇ ರಾಜೀನಾಮೆ ನೀಡಬೇಕೆಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಶ್ಯಾಮಲಾ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

9 + thirteen =