ಕೋವಿಡ್ ಅವಧಿಯಲ್ಲಿ ಆನ್‌ಲೈನ್ ಡೆಲಿವರಿ ಸೇವೆಗೆ ಅವಕಾಶ ನೀಡಿದ ಸರಕಾರ ಸ್ಥಳೀಯ ವ್ಯಾಪಾರಿಗಳ ಗಾಯದ ಮೇಲೆ ಬರೆ ಎಳೆದಿದೆ: ಮೊಬೈಲ್ ರಿಟೈಲರ್ಸ್ ಅಸೋಸಿಯೆಶನ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸ್ಥಳೀಯ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿರುವ ಸರಕಾರವು ವಿದೇಶಿ ಆನ್‌ಲೈನ್ ಕಂಪನಿಗಳಿಗೆ ನೀಡಿರುವ ಆನ್‌ಲೈನ್ ಡೆಲಿವರಿ ಸೇವೆಯನ್ನು ಕೂಡ ನಿಲ್ಲಿಸಬೇಕೆಂದು ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೆಶನ್ ಉಡುಪಿ ಘಟಕ ಸರಕಾರಕ್ಕೆ ಮನವಿ ಮಾಡಿದೆ.

Call us

Click here

Click Here

Call us

Call us

Visit Now

Call us

ಕರೋನಾ ಎರಡನೇ ಅಲೆ ತೀವ್ರವಾಗಿ ಹರಡಿದ್ದು ಸರಕಾರವೂ ಜನರ ಒಳಿತಿಗಾಗಿ ಕೈಗೊಂಡ ಲಾಕ್‌ಡೌನ್ ನಿಯವನ್ನುಸ್ಥಳೀಯ ವ್ಯಾಪಾರಿಗಳು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ಆದರೆ ಸರಕಾರ ನೊಂದ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ಕೊಡದೆ ವಿದೇಶಿ ಆನ್‌ಲೈನ್ ಕಂಪನಿಗಳಿಗೆ ಸಹಕಾರ ಕೊಟ್ಟು ಸ್ಥಳಿಯ ವ್ಯಾಪಾರಿಗಳಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ.

ಸರಕಾರ ವ್ಯಾಪಾರವನ್ನು ಬಂದ್ ಮಾಡಲು ಸುತ್ತೋಲೆ ಹೊರಡಿಸಿದಾಕ್ಷಣ ಚಾಚೂ ತಪ್ಪದೆ ಪಾಲಿಸುವ ವ್ಯಾಪಾರಿಗೊಂದು ನೀತಿ, ಆನ್‌ಲೈನ್ ಕಂಪನಿಗಳಾದ ಅಮೆಜಾನ್ ಪ್ಲಿಪ್‌ಕಾರ್ಟ್‌ಗಳಿಗೊಂದು ನೀತಿ .  ಫೇಸ್ ಮಾಸ್ಕ್ ಹ್ಯಾಂಡ್ ಗ್ಲೋಸ್, ಸ್ಯಾನಿಟೈಝೇರ್ ಯಾವುದೇ ಮುಂಜಾಗ್ರತೆಯನ್ನು ವಹಿಸದೆ ಆನ್‌ಲೈಕಂಪನಿಗಳಿಗೆ ತಮ್ಮ ವ್ಯವಹಾರವನ್ನುನಡೆಸುತ್ತಿದ್ದಾರೆ. ಆನ್‌ಲೈನ್ ಕಂಪನಿಗಳಿಗೆ ಮನೆಮನೆಗೆ ಪಾರ್ಸೆಲ್ಗಳುಬರುತ್ತದೆ ಆದರೆ ಇದರಿಂದ ಕೊರೋನಾ ಹರಡುದಿಲ್ಲವೇ? ಸ್ಥಳೀಯ ವ್ಯಾಪಾರಿಗಳು ವ್ಯಾಪಾರ ಮಾಡಿದರೆ ಅಂಗಡಿಗಳನ್ನು ತೆರೆದರೆ ಮಾತ್ರ ಕೊರೊನ ಹರಡುವುದೇ ಎಂದು ಮೊಬೈಲ್ ರಿಟೈಲರ್ಸ್ ಅಸೋಸಿಯೆಶನ್ ಪ್ರಶ್ನಿಸಿದೆ.

ಜನರ ಒಳಿತಿಗಾಗಿ ಲಾಕ್‌ಡೌನ್ ಎಂದು ಮಾಡಿದರೆ ದಯವಿಟ್ಟುಎಲ್ಲರಿಗೂ ಒಂದೇ ನ್ಯಾಯ ಕೊಟ್ಟು ವಿದೇಶಿ ಆನ್ ವಿದೇಶಿ ಆನ್‌ಲೈನ್ ಕಂಪನಿಗಳಿಗೆ ನಿಷೇಧ ತನ್ನಿ. ಜನರಿಗೆ ಕೊರೋನಾ ಹರಡುವುದನ್ನು ನಿಲ್ಲಿಸಿ. ಇದಕ್ಕೆ ನಮ್ಮ ಸಣ್ಣಮೊಬೈಲ್ ವ್ಯಾಪಾರಿಗಳ ಸಂಪೂರ್ಣ ಬೆಂಬಲವಿದೆ. ಆದರೆ ಇಂದು ಕರ್ನಾಟಕ ಸರಕಾರ ಕೇವಲ ಕಂಪನಿಗಳಿಗೆ ಕಂಪನಿಗಳಿಗೆ ಮಾತ್ರ ಎಲ್ಲಾ ರೀತಿಯ ಸರಕುಗಳನ್ನುಸರಬರಾಜು ಮಾಡಲು ಅವಕಾಶ ಕೊಟ್ಟು ವಿದೇಶಿ ಅನ್ ಕಂಪನಿಗಳಿಗೆ ಕಂಪನಿಗಳಿಗೆ ಪರೋಕ್ಷ ಬೆಂಬಲ ನೀಡಿದಂತಾಗಿದೆ

ಸ್ಥಳೀಯ ಮೊಬೈಲ್ ವ್ಯವಹಾರಗಳ ಮೇಲೆ ಎಲ್ಲಾ ಮೊಬೈಲ್ ವಿತರಕರು, ಸಣ್ಣ ಮೊಬೈಲ್ ವ್ಯಾಪಾರಿಗಳು, ಮಾರಾಟ ಅಧಿಕಾರಿಗಳು, ಮಾರಾಟ ಪ್ರವರ್ತಕರು ಮತ್ತು ಅವರ ಕುಟುಂಬಗಳು ಹೆಚ್ಚುಅವಲಂಬಿತರಾಗಿದ್ದಾರೆ. ಸಣ್ಣ ಮೊಬೈಲ್ ವ್ಯಾಪಾರಿಗಳು ಕಳೆದ ಬಾರಿ ಆದಂತಹ ಲಾಕ್ಡೌನ್ನಿಂದ ಇನ್ನೂ ಚೇತರಿಸಿಕೊಂಡಿಲ್ಲ ಈಗಾಗಲೇ ಎರಡನೇ ಮಹಾಮಾರಿ ಅಲೆ ತುಂಬಾ ದೊಡ್ಡದಾಗಿ ನಮ್ಮಸಣ್ಣ ಮೊಬೈಲ್ ವ್ಯಾಪಾರಿಗಳ ಜೀವದ ಜೊತೆ ಆಟ ಆಡುತ್ತಿದೆ.

Call us

ನಮ್ಮ ಸಣ್ಣ ಮೊಬೈಲ್ ವ್ಯಾಪಾರಿಗಳ ಸಮಸ್ಯೆಗಳನ್ನು ಇಮೇಲ್ ಮತ್ತು ಟ್ವೀಟ್ ಮುಖಾಂತರ ಈಗಾಗಲೇ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದ ಹಿತದೃಷ್ಟಿಗಾಗಿ ತಕ್ಷಣ ವಿದೇಶಿ ಆನ್‌ಲೈನ್ ಕಂಪನಿಗಳಿಗೆ ವ್ಯಾಪಾರವನ್ನು ಕರ್ನಾಟಕ ರಾಜ್ಯದಲ್ಲಿ ನಿರ್ಬಂಧಿಸಿ ಸ್ಥಳೀಯ ವ್ಯಾಪಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಪರಿಹರಿಸಬೇಕೆಂದು ಮೊಬೈಲ್ ರಿಟೈಲರ್ಸ್ ಅಸೋಸಿಯೆಶನ್ ಉಡುಪಿ ಘಟಕ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

17 − thirteen =