ಕೋವಿಡ್ ತಡೆಗೆ ಗ್ರಾಪಂ ಕಾರ್ಯಪಡೆಗಳು ಸದಾ ಸನ್ನದ್ದ: ಸಿಇಓ ಡಾ. ನವೀನ್ ಭಟ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ, ಸರ್ಕಾರದ ನಿರ್ದೇಶನದಂತೆ ಕೋವಿಡ್ -19ರ ಪ್ರಕರಣಗಳನ್ನು ತಡೆಗಟ್ಟುವುದು, ಪರೀಕ್ಷೆ, ಕ್ವಾರಂಟೈನ್, ನಿಯಂತ್ರಣ, ಚಿಕಿತ್ಸೆ, ಹಾಗೂ ಲಸಿಕಾಕರಣಗಳನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವಾರು ಕೋವಿಡ್ ಕಾರ್ಯಪಡೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

Call us

Click here

Click Here

Call us

Call us

Visit Now

Call us

ಪ್ರಸ್ತುತ ಹೋಮ್ ಐಸೋಲೇಷನ್ ನಲ್ಲಿರುವ ವ್ಯಕ್ತಿಗಳ ಮನೆಗಳನ್ನು ಭೇಟಿ ಮಾಡಿ, ಹೋಮ್ ಐಸೋಲೇಷನ್ ನ್ನು ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ, ಪ್ರತ್ಯೇಕ ಕೊಠಡಿ, ಪ್ರತ್ಯೇಕ ಶೌಚಾಲಯ ಹೊಂದಿರುವ ಬಗ್ಗೆ, ಆರೋಗ್ಯದ ಏರುಪೇರುಗಳ ಬಗ್ಗೆ, ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ವೈದ್ಯಾಧಿಕಾರಿಗಳ ಮೂಲಕ ಔಷಧೋಪಚಾರ ನೀಡುವ, ತಾಲೂಕು ಕೋವಿಡ್ ಕೇರ್ ಸೆಂಟರ್ ಗೆ ಆಥವಾ ಆಸ್ಪತ್ರೆಗೆ ಸ್ಥಳಾಂತರ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಕ್ರಮಗಳನ್ನು ಹಾಗೂ ಕೋವಿಡ್ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಪ್ರತ್ಯೇಕ ಕೊಠಡಿಯನ್ನು ಹೊಂದಿಲ್ಲದೇ ಇರುವ ಹಾಗೂ ಪ್ರತ್ಯೇಕ ಶೌಚಾಲಯ ಹೊಂದದೇ ಇರುವ ವ್ಯಕ್ತಿಗಳನ್ನು , ಕಾರ್ಯಪಡೆಯ ಸಹಕಾರದಲ್ಲಿ ಕಡ್ಡಾಯವಾಗಿ ಕೋವಿಡ್ ಕೇರ್ಸೆಂ ಟರ್ ಗೆ ಸ್ಥಳಾಂತರಗೊಳ್ಳಲು ಕೋರಲಾಗಿದೆ. ಸದರಿ ಸೋಂಕಿತರು ಚಿಕಿತ್ಸಾ ಶಿಷ್ಠಾಚಾರದಂತೆ ನಿಗದಿತ ದಿನಗಳವರೆಗೆ ಈ ಕೇಂದ್ರಗಳಲ್ಲಿದ್ದು,ಸೋಂಕಿನಿಂದ ಗುಣಮುಖರಾದ ನಂತರ ವೈದ್ಯರ ಸಲಹೆಯಂತೆ ಪುನಃ ತಮ್ಮ ಮನೆಗಳಿಗೆ ತೆರಳಬಹುದಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಗ್ರಾಮಪಂಚಾಯತ್ ಕಾರ್ಯಪಡೆಗಳಿಗೆ ಸೂಚಿಸಲಾಗಿದೆ.

ಹೋಮ್ ಐಸೋಲೇಷನ್ ನಲ್ಲಿ ಮುಂದುವರೆಯುವ ವ್ಯಕ್ತಿಗಳು ಪಾಲಿಸಬೇಕಾದ ಕ್ರಮಗಳ ಬಗ್ಗೆ ಗ್ರಾಮ ಪಂಚಾಯತ್ವಾರು ಕರಪತ್ರಗಳನ್ನು ಮುದ್ರಿಸಲಾಗುತ್ತಿದ್ದು, ಹೋಮ್ ಐಸೋಲೇಷನ್ ನಲ್ಲಿರುವ ವ್ಯಕ್ತಿಗಳಿಗೆ ಔಷಧೋಪಚಾರದ ಕಿಟ್ ನೊಂದಿಗೆ ವಿತರಿಸಲಾಗುತ್ತಿದೆ.
ಪ್ರತಿಯೊಂದು ಗ್ರಾಮಪಂಚಾಯತ್ ನಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಕಾರ್ಯಪಡೆಗಳ ಮೂಲಕ ಬೇಕಾದ ಸಹಾಯಕ್ಕಾಗಿ ಆಯಾ ಗ್ರಾಮಪಂಚಾಯತ್ ಸಹಾಯವಾಣಿ ಗೆ ಕರೆ ಮಾಡಬಹುದಾಗಿದ್ದು,

ಜಿಲ್ಲಾ ಮಟ್ಟದಲ್ಲಿ ಸಮನ್ವಯಕ್ಕಾಗಿ, ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ( ಸಹಾಯವಾಣಿ ಸಂಖ್ಯೆ : 0820 2574937) ಹೋಮ್ ಐಸೋಲೇಷನ್ ನಲ್ಲಿರುವವರು ಮನೆಯಲ್ಲಿ ಪ್ರತ್ಯೇಕವಾಗಿರಲು ಅಗತ್ಯ ವ್ಯವಸ್ಥೆಗಳಿಲ್ಲದಿದ್ದಲ್ಲಿ ತಾಲೂಕು ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಗೊಳ್ಳಲು, ಸ್ಥಳೀಯ ಗ್ರಾಮಪಂಚಾಯತ್ ಕಾರ್ಯಪಡೆಯನ್ನು ಆಥವಾ ಈ ಕೆಳಗೆ ಕಾಣಿಸಿದ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಬೈಂದೂರು, ಕುಂದಾಪುರ ತಾಲೂಕು ವ್ಯಾಪ್ತಿ: 7795543611 ಉಡುಪಿ, ಬ್ರಹ್ಮಾವರ, ಕಾಪು ತಾಲೂಕು ವ್ಯಾಪ್ತಿ: 7204789104 ಕಾರ್ಕಳ, ಹೆಬ್ರಿ ತಾಲೂಕು ವ್ಯಾಪಿ ಸಂಖ್ಯೆ : 9141001239
ಉಡುಪಿ ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿರುವವರಿಗಾಗಿ ಟೆಲಿ-ಸಮಾಲೋಚನೆಯ ( (tele  consultation) ಮೂಲಕ ಉಚಿತ ಸಲಹೆ ನೀಡಲು ಸ್ವಯಂಪ್ರೇರಿತರಾಗಿ ಭಾರತೀಯ ವೈದ್ಯಕೀಯ ಸಂಘ ಮತ್ತು ಇತರ ಕ್ಷೇತ್ರಗಳ ತಜ್ಞರು ಸಮ್ಮತಿಸಿ ಮುಂದೆ ಬಂದಿದ್ದು, ಸದರಿಯವರ ದೂರವಾಣಿ ಸಂಖ್ಯೆಗಳನ್ನು ಪ್ರಚುರಪಡಿಸಲಾಗಿದೆ. ಸಾರ್ವಜನಿಕರು ತಜ್ಞರಿಂದ ನೀಡಲಾಗುವ ಸೇವೆಯ ಸದುಪಯೋಗವನ್ನು ಪಡೆಯಲು ಕೋರಲಾಗಿದೆ.

Call us

ಟೆಲಿ-ಸಮಾಲೋಚನೆಯ (tele  consultation ) ಮೂಲಕ ಉಚಿತ ಸಲಹೆ ನೀಡಲು ಸ್ವಯಂಪ್ರೇರಿತರಾಗಿ ತಜ್ಞ ವೈದ್ಯರು ಸಿದ್ಧರಾಗಿದ್ದಲ್ಲಿ ಜಿಲ್ಲಾ ಓಉಔ ಸಮನ್ವಯ ಕೇಂದ್ರ ದೂರವಾಣಿ ಸಂ; 0820 2574936 ನ್ನು ಸಂಪರ್ಕಿಸಲು ಕೋರಿದೆ.

ಕೋವಿಡ್ ಕಾರ್ಯಪಡೆಗಳಿಗೆ ಸಹಕಾರ ನೀಡಲು ವಿವಿಧ ಸಂಘ ಸಂಸ್ಥೆಗಳು, ಓಉಔ ಗಳಿಗೆ ಕೋರಲಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳು, ಓಉಔ ಗಳು ದಿನಸಿ, ಆಹಾರ, ಅಗತ್ಯ ಉಪಕರಣಗಳನ್ನು ಒದಗಿಸುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಕೋವಿಡ್ ಕಾರ್ಯಪಡೆ ಹಾಗೂ ಓಉಔ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಂಘ ಸಂಸ್ಥೆಗಳ ಸಹಭಾಗಿತ್ವದ ಬಗ್ಗೆ ದೂರವಾಣಿ ಸಂ; 08202574936 ನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಕೋವಿಡ್ ಕಾರ್ಯಪಡೆಗಳ, ಸಹಾಯವಾಣಿ ಗಳ ಸೌಲಭ್ಯಗಳನ್ನು ಬಳಸಿಕೊಂಡು ಕೋವಿಡ್ ಸಾಂಕ್ರಾಮಿಕವು ಹರಡದಂತೆ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

3 − two =